ರಾಷ್ಟ್ರೀಯ ಹೆದ್ದಾರಿ N H 17 ರ ನೇತ್ರಾವತಿಯ ಹಳೆಯ ಸೇತುವೆಯ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಸಭಾಧ್ಯಕ್ಷ ಯು ಟಿ ಖಾದರ್ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಬಳಿ ಮಾತುಕತೆ ನಡೆಸಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.ಸೇತುವೆಯ ಅಡಿ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ನುರಿತ ತಂಡದ ನಾಲ್ಕೈದು ಜನ ಮಾತ್ರ ನಿಂತು ಕೆಲಸ ಮಾಡುವ ಅವಕಾಶವಿದ್ದು,ಆದಾಗ್ಯೂ ಈ ತಿಂಗಳ 25ರ ಒಳಗಾಗಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ದೇರಳಕಟ್ಟೆ,ಕೊಣಾಜೆ,ಮುಡಿಪು,ಸಜೀಪ ಭಾಗದ ಸಾರ್ವಜನಿಕರು ಹಾಗೂ ಕೇರಳ ಸಂಪರ್ಕಿಸುವ ಕೆಲ ವಾಹನ ಸವಾರರು ಈಗಾಗಲೇ ಮಾನ್ಯ ಯು.ಟಿ.ಖಾದರ್ ರವರ ದೂರ ದೃಷ್ಟಿಯ ಯೋಜನೆಯಲ್ಲಿ ನಿರ್ಮಾಣವಾದ ಅಡ್ಯಾರು ಸೇತುವೆಯಲ್ಲಿ ಸಂಚರಿಸುತ್ತಿದ್ದು ನೇತ್ರಾವತಿ ಸೇತುವೆಯ ಸ್ವಲ್ಪ ಮಟ್ಟಿನ ದಟ್ಟಣೆ ಕಡಿಮೆಯಾಗಿದೆ.ಆದರೂ ನೇತ್ರಾವತಿ ಸೇತುವೆ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿ.
.jpeg)