#ಮೋದಿಜೀ, #ನೆನಪಿರಲಿ,
ಈ ದೇಶದ ಮುಸ್ಲಿಮನೊಬ್ಬ ವಿಶ್ವ ವಿಖ್ಯಾತ ವಿಜ್ಞಾನಿಯಾಗಿ, ಭಾರತದ ರಾಷ್ಟ್ರಪತಿಯೂ ಆಗಿ ದೇಶಕ್ಕೆ ಸಮರ್ಥ ಕೊಡುಗೆ ನೀಡಿದ್ದರು.
ಸ್ವಾಭಿಮಾನಿ -ಆರೋಗ್ಯವಂತ ಮುಸಲ್ಮಾನ ಪಂಚರ್ ಮಾತ್ರವಲ್ಲ ಇನ್ನೂ ಹೆಚ್ಚಿನ ಪರಿಶ್ರಮದಿಂದ ದುಡಿದು ತಿನ್ನುತ್ತಾನೆಯೇ ಹೊರತು ನಿಮ್ಮ ಹಾಗೆ ಗಟ್ಟಿ ಮುಟ್ಟಾದ ದೈಹಿಕ ಸಾಮರ್ಥ್ಯ ಇದ್ದೂ ಭಿಕ್ಷೆ ಬೇಡಿ ಬದುಕುವುದಿಲ್ಲ!
ಈ ದೇಶದ ಮೊದಲ ಅರಸಿ ರಜಿಯಾ ಸುಲ್ತಾನ. ಸುಪ್ರೀಂ ಕೋರ್ಟಿನ ಮೊದಲ ನ್ಯಾಯಾಧೀಶೆ ಕೂಡಾ ಮುಸ್ಲಿಂ. ಮೊದಲ ಮಹಿಳಾ ರಾಜ್ಯಪಾಲೆಯೂ ಮುಸ್ಲಿಂ! ಮುಂದೊಮ್ಮೆ ಭಾರತದ ಪ್ರಧಾನಿ ಮುಸಲ್ಮಾನ ಆಗಲೂ ಬಹುದು! ಈ ನೆಲದ ಸ್ವಾತಂತ್ರ್ಯಕ್ಕಾಗಿ ಅತ್ಯಂತ ಹೆಚ್ಚು ಬಲಿದಾನ ನೀಡಿದವರೂ ಮುಸ್ಲಿಮರೇ!
ಮೋದಿಜೀ, ಪ್ರಧಾನಿಯಾಗಿ ರಾಜಧರ್ಮ ಪಾಲಿಸಿ, ಸರ್ಕಾರ ಹೇಗಿರ ಬೇಕು ಎಂದು ಸಂವಿಧಾನವನ್ನೊಮ್ಮೆ ಓದಿ ನೋಡಿ!
--ಫಾರೂಕ್ ಉಳ್ಳಾಲ್.
