ಗುರುಪುರ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಪಂಚಾಯತ್ ಸಮಿತಿಯ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಹಾಗೂ ಸನ್ಮಾನ ಕಾರ್ಯಕ್ರಮವು " ಹಸಿವು ಮತ್ತು ಭಯ ಕೊನೆಗೊಳ್ಳಲಿ, ನೈಜ ಜನಾಧಿಪತ್ಯ ಸ್ಥಾಪನೆಯಾಗಲಿ." ಎಂಬ ಘೋಷ ವಾಕ್ಯದೊಂದಿಗೆ SDPI ಅಡ್ಡೂರು ಕಚೇರಿಯ ಮುಂಭಾಗದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಎಸ್.ಡಿ.ಪಿ.ಐ ಗುರುಪುರ ಪಂಚಾಯತ್ ಸಮಿತಿಯ ಕಾರ್ಯದರ್ಶಿ ರಹೀಮ್ ಬೊಟ್ಟಿಕ್ಕೆರೆ ಧ್ವಜಾರೋಹಣ ನೆರವೇರಿಸಿದರು, ಎಸ್.ಡಿ.ಪಿ.ಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣವನ್ನು ಮಾಡಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿ ಮನೆ ಉಪಾಧ್ಯಕ್ಷರಾದ ಝೈನುದ್ದೀನ್ ಡೆಲ್ಮಾ, ಸಲಹೆಗಾರ ಕಾಸಿಂ ಪ್ಯಾರ,ದ.ಕ.ಜಿಲ್ಲಾ ಮದ್ರಾಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಧ್ಯಕ್ಷ ಹಾಜಿ ಎಮ್ ಎಚ್ ಮುಹಿಯುದ್ದೀನ್, ಕಾಂಜೀಲಕೋಡಿ ಜುಮಾ ಮಸೀದಿ ಅಧ್ಯಕ್ಷ ಝಕರಿಯ ಕೋಡಿಬೆಟ್ಟು ಮಾಜಿ ಅಧ್ಯಕ್ಷ ಅಹ್ಮದ್ ಬಾವ ಕಾಂಜೀಲಕೋಡಿ, SDPI ಗುರುಪುರ ಬ್ಲಾಕ್ ಅಧ್ಯಕ್ಷ ಎ.ಕೆ.ರಿಯಾಝ್,ಎ.ಕೆ.ಮುಸ್ತಾಕ್, ಹಮ್ಮಬ್ಬ ರೈಫಲ್, ಅಬ್ದುಲ್ ಖಾದರ್ ನಡುಗುಡ್ಡೆ, ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಅಶ್ರಫ್, ಮನ್ಸೂರ್ ಟಿಬೆಟ್, ಶಾಹಿಕ್ ಪಾಂಡೇಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
