ಉಳ್ಳಾಲ: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ

 




ಉಳ್ಳಾಲ
: ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಮರವೊಂದು ಮುರಿದು ಕಾರಿನ ಮೇಲೆ ಉರುಳಿದ ಘಟನೆ

ಸೋಮವಾರ ಮಧ್ಯಾಹ್ನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರುನಲ್ಲಿ ಈ ಘಟನೆ ನಡೆದಿದೆ. ಪಿಲಾರಿನಲ್ಲಿ ನೆಲೆಸಿರುವ ಆಶಿಶ್ ಎಂಬವರು ತಮ್ಮ ಕಾರನ್ನು ಮನೆಯ ಹೊರಗಡೆಯ ಪ್ರದೇಶದಲ್ಲಿ ನಿಲ್ಲಿಸಿ, ಮನೆಯೊಳಗೆ ತೆರಳಿದ ತಕ್ಷಣವೇ ಗಾಳಿ ಮತ್ತು ಮಳೆಗೆ ಭಾರೀ ಗಾತ್ರದ ಮರವೊಂದು ಮುರಿದು ಕಾರಿನ ಮೇಲೆ ಉರುಳಿದೆ. 


ಘಟನೆಯ ಸಂದರ್ಭ ಆಶಿಶ್ ಅವರು ಕಾರಿನ ಒಳಗಡೆ ಇರದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸೋಮೇಶ್ವರ ಪುರಸಭಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×