ಭರತ್ ಶೆಟ್ಟಿಗೆ ರಾಹುಲ್ ಪರ್ಫಾರ್ಮೆನ್ಸ್ ನಂಜು ತರಿಸಿದೆ,ಅದನ್ನೇ ಕಕ್ಕಿದ್ದಾರೆ: ಕೆ.ಅಶ್ರಫ್.



ಮಂಗಳೂರು: ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಇತ್ತೀಚೆಗೆ ಪ್ರತಿಭಟನೆಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿಯನ್ನು ಅವಹೇಳನ ಮಾಡುತ್ತಾ ಪಾರ್ಲಿಮೆಂಟ್ ಒಳಗೆ ಕೆನ್ನೆಗೆ ಬಾರಿಸಬೇಕು ಎಂಬಿತ್ಯಾದಿಯಾಗಿ ಅಸಾಂವಿಧಾನಿಕ ಪದಬಳಕೆ ಮಾಡಿದ್ದಾರೆ. ರಾಜಕೀಯವನ್ನು ರಾಜಕೀಯವಾಗಿಯೇ ಎದುರು ಹಾಕಿ ಕೊಳ್ಳುವ ತಾಕತ್ತು ಇಲ್ಲದ ಭರತ್ ಶೆಟ್ಟಿ, ರಾಹುಲ್ ವಿರುದ್ಧ ಬಲ ಪ್ರಯೋಗ ಮಾಡುವ ಪ್ರಸ್ತಾಪ ಮಾಡಿದ್ದಾರೆ. ರಾಹುಲ್ ಗಾಂಧಿಯು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ್ದನ್ನು ತಡೆಯಲಾರದೆ ಭರತ್ ಶೆಟ್ಟಿ ನಂಜು ಕಾರುತ್ತಿದ್ದಾರೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ದರ್ಜೆಯ ಜನಪ್ರತಿನಿಧಿ, ಈ ಪ್ರತಿನಿಧಿಯನ್ನು ಭರತ್ ಶೆಟ್ಟಿ ಸುರತ್ಕಲ್ ನಲ್ಲಿ ನಿಂತು ಕೆನ್ನೆಗೆ ಹೊಡೆಯಬೇಕು ಅಂದರೆ,ಬಿಜೆಪಿಯವರು ಭರತ್ ಶೆಟ್ಟಿಯನ್ನು ಅರ್ಹ ರೀತಿಯಲ್ಲಿಯೇ ಪರಿಗಣಿಸಬೇಕಿದೆ. ಭರತ್ ಶೆಟ್ಟಿಯೂ ಅರಿಯಲಿ.


ಕೆ.ಅಶ್ರಫ್( ಮಾಜಿ ಮೇಯರ್) 

ಮಂಗಳೂರು.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×