ಇತ್ತೀಚಿನ ಜಗತ್ತಿನಲ್ಲಿ ಜಮೀನು ಖರೀದಿಸಲು ಲಕ್ಷಾಂತರ ರೂಪಾಯಿಗಳು ಬೇಕಾಗುತ್ತವೆ. ಆದರೆ, ಇನ್ನೂ ಕೆಲವರು ತಮ್ಮ ಪೂರ್ವಜರ ಆಸ್ತಿಯಲ್ಲಿ ಪಾಲನ್ನು ಪಡೆಯಲು ಕಾಯುತ್ತಿದ್ದಾರೆ. ಹಿಂದೆ ಗಂಡಸರಿಗಷ್ಟೇ ಆಸ್ತಿಯ ಹಕ್ಕು ಇತ್ತು, ಆದರೆ ಕಾಲಕ್ರಮೇಣ ಮಹಿಳೆಯರೂ ಪುರುಷರಷ್ಟೇ ಆಸ್ತಿಯಲ್ಲಿ ಹಕ್ಕುದಾರರಾಗಿದ್ದಾರೆ. ಹೀಗಾಗಿ, ಆಸ್ತಿಯಲ್ಲಿ ಸಮಾನವಾಗಿ ಮಹಿಳೆಯರಿಗೆ ಸಮಪಾಲು ನೀಡಬೇಕು ಎಂಬ ನಿಯಮ ಚಾಲ್ತಿಯಲ್ಲಿದೆ. ಈಗಿನ ನಿಯಮಗಳ ಪ್ರಕಾರ, ಮಹಿಳೆಯರು ಆಸ್ತಿ ಕೇಳುವ ಹಕ್ಕು ಹೊಂದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನೀಡಿದ್ದೇವೆ.
ಹೆಣ್ಣಿಗೆ ಆಸ್ತಿ ಕೇಳುವ ಹಕ್ಕು ಇಲ್ಲವೇ?
ತಂದೆಯು ಬದುಕಿರುವಾಗ, ಅವರ ಸ್ವಂತ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಮಗನಿಗಾಗಲಿ ಹೆಣ್ಣು ಮಗಳಿಗಾಗಲಿ ಇರುವುದಿಲ್ಲ. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಆಸ್ತಿ ಪಾಲನ್ನು ಅಂತೆಯೇ ಪೂರ್ಣ ಹಕ್ಕನ್ನು ನೀಡುವುದು ತಂದೆಗೆ ಬಿಟ್ಟಿದ್ದು, ಅದರಲ್ಲಿ ಪಾಲು ಕೇಳುವ ಹಕ್ಕು ಮಕ್ಕಳಿಗೆ ಇರುವುದಿಲ್ಲ.
ತಂದೆ ಮರಣ ಹೊಂದಿದ ನಂತರ, ತಂದೆಯ ಸ್ವಂತ ಆಸ್ತಿಯನ್ನು ಯಾರಿಗಾದರೂ ಮಾರಿದರೆ ಅಥವಾ ದಾನ ಮಾಡಿದ್ದರೆ, ಅಂತಹ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಇರುವುದಿಲ್ಲ. ತಂದೆ ಆಸ್ತಿ ಯಾರಿಗಾದರೂ ವರ್ಗಾಯಿಸಿದರೆ, ಅದರಲ್ಲಿ ಪಾಲು ಕೇಳುವ ಹಕ್ಕು ಇರುವುದಿಲ್ಲ. ಅಂತೆಯೇ, ಬಿಡುಗಡೆ ಪತ್ರಕ್ಕೆ ಸಹಿ ಹಾಕಿದರೆ, ಮಹಿಳೆಯರು ಅಂತ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ.
ಹೊಸ ನಿಯಮವನ್ನು ಜಾರಿಗೆ ತಂದ ಸರ್ಕಾರದ ಪ್ರಕಾರ, ಬಾಯಿಗೆ ಬಂದಂತೆ ಆಸ್ತಿ ಬೇಡ ಎಂದು ಹೇಳಿ ಹಲವಾರು ವರ್ಷಗಳ ನಂತರ ಆಸ್ತಿಯನ್ನು ಕೇಳುವ ಹಕ್ಕು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ, ಆಸ್ತಿಯಲ್ಲಿ ಪಾಲನ್ನು ಪಡೆಯಲು ಕಾನೂನು ಹೋರಾಟ ಮಾಡಬಹುದಾಗಿದೆ. ಹಾಗೆಯೇ, ಇಂದು ಭಾರತದ ಕಾಯ್ದೆಯ ಪ್ರಕಾರ 2005ರ ಮೊದಲ ಆಸ್ತಿಯನ್ನು ಹಂಚಿಕೆ ಮಾಡಿದ್ದರಿಂದ ಅನುಭವಿಸುತ್ತಿರುವ ವ್ಯಕ್ತಿಯನ್ನು ಹಿಂತಿರುಗಿಸುವಂತೆ ಕೇಳುವ ಹಕ್ಕು ಇರುವುದಿಲ್ಲ ಎಂದು ತಿಳಿಸಲಾಗಿದೆ.
.jpg)