ಪೇಪರ್ ಕಪ್ ಬಳಕೆಯಿಂದ ಆಗುವ ದುಷ್ಪರಿಣಾಮಗಳು
ಪ್ರತಿ ಟೀ ಸ್ಟಾಲ್ ಅಥವಾ ಕಚೇರಿಯಲ್ಲಿ ನಾವು ಪೇಪರ್ ಕಪ್‌ನಲ್ಲಿ ಚಹಾವನ್ನು ನೀಡುವುದನ್ನು ನೋಡುತ್ತೇವೆ. ನೀವೂ ಪೇಪರ್ ಕಪ್‌ನಲ್ಲಿ ಟೀ ಕುಡಿಯುತ್ತಿದ್ದರೆ ಎಚ್ಚರದಿಂದಿರಿ, ಇದರಿಂದ ಆರೋಗ್ಯ ಸಮಸ್ಯೆ ಎದುರಾಗಬಹುದು. ಪೇಪರ್ ಕಪ್‌ನಲ್ಲಿ ಟೀ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯೋಣ.
ಸಾಮಾನ್ಯವಾಗಿ ಪೇಪರ್ ಕಪ್‌ಗಳ ಮೇಲೆ ರಾಸಾಯನಿಕಗಳಿಂದ ಮಾಡಿದ ಡಿಸೈನ್ ಇರುತ್ತವೆ. ಈ ಕಾರಣದಿಂದಾಗಿ, ವಿಷವು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಇದು ಸ್ಲೋ ಪಾಯಿಸನ್ ರೀತಿ ಕಾರ್ಯನಿರ್ವಹಿಸುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಗಂಭೀರ ಸಮಸ್ಯೆಗಳಿಗೆ ಮತ್ತು ಅತಿಸಾರಕ್ಕೆ ಕಾರಣವಾಗಬಹುದು.
ಇದನ್ನು ಓಧಿ :- 2024ರಲ್ಲಿ ಮಹಿಳೆಯರಿಗೆ ಹೊಸ ಆಸ್ತಿ ನಿಯಮಗಳು | ಮಹಿಳೆಯರಿಗೆ ಸರಕಾರದಿಂದ ಉತ್ತಮ ಆಸ್ತಿ ನಿಯಮಗಳು
ಪೇಪರ್ ಕಪ್‌ಗಳಲ್ಲಿ ಚಹಾವನ್ನು ಕುಡಿಯುವುದರಿಂದ ಮೂತ್ರಪಿಂಡಗಳ ಮೇಲೂ ನೇರ ಪರಿಣಾಮ ಬೀರುತ್ತದೆ. ಇದಲ್ಲದೆ, ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡಿ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಒಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ 2-3 ಬಾರಿ ಪೇಪರ್ ಕಪ್‌ನಿಂದ ಚಹಾವನ್ನು ಸೇವಿಸಿದರೆ, ಅವನ ದೇಹವು 75,000 ಸೂಕ್ಷ್ಮ ಕಣಗಳನ್ನು ಪಡೆಯುತ್ತದೆ. ಪೇಪರ್ ಕಪ್ ಅನ್ನು ಮೃದುಗೊಳಿಸಲು ಮತ್ತು ಅಂಟಿಸಲು ಫೆವಿಕಾಲ್‌ನಂತಹ ರಾಸಾಯನಿಕ ಗಮ್ ಅನ್ನು ಸಹ ಬಳಸಲಾಗುತ್ತದೆ. ಆ ಕಪ್‌ಗೆ ಬಿಸಿಯಾದ ಟೀ ಸುರಿದಾಗ, ಚಹಾದಲ್ಲಿ ಹಲವು ಬಗೆಯ ರಾಸಾಯನಿಕಗಳು ಬಿಡುಗಡೆಯಾಗುತ್ತವೆ.
ಇದನ್ನೂ ಓದಿ :- ಉಳ್ಳಾಲ: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ
ಸೂಚನೆ
ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ.
