ಉಳ್ಳಾಲ ಬೀಚ್‌ನಲ್ಲಿ ನೀರಿಗಿಳಿದು ಅಪಾಯದಲ್ಲಿದ್ದ ಮೂವರು ಯುವತಿಯರ ಪ್ರಾಣ ರಕ್ಷಿಸಿದ ಉಳ್ಳಾಲದ ಧೈರ್ಯವಂತರು



_____________________________

   ಧೈರ್ಯವಂತ ಉಳ್ಳಾಲದ ನಾಗರಿಕರು.

______________________________

        ಇಂದು ಉಳ್ಳಾಲ ಕಡಲ ಕಿನಾರೆಗೆ ಬಂದು ನೀರಿಗಿಳಿದು ಆಟವಾಡುವ ಮೂವರು ಯುವತಿಯರು ನೀರು ಪಾಲಾದರು.ಅಲ್ಲಿರುವವರೆಲ್ಲರೂ ಸೇರಿ ಆ ಮೂರು ಯುವತಿಯರನ್ನು ಮೇಲಕ್ಕೆತ್ತಿ ಅವರನ್ನು ಆಸ್ಪತ್ರೆಗೆ ಸೇರಿಸಿ ಅವರ ಜೀವವನ್ನು ಉಳಿಸಲು ಕಾರಣರಾದರು. 

          ಉಳ್ಳಾಲಕ್ಕೆ ಯಾರಾದರೂ ರಾಜ್ಯ ಹೊರ ರಾಜ್ಯದಿಂದ ಬೀಚ್ ವಿಹರಿಸಲು ಬಂದರೆ ಅವರು ಸಂತೋಷಗೊಳ್ಳುವುದು ಸರ್ವೇ ಸಾಮಾನ್ಯ ಮಾತ್ರವಲ್ಲ ನೀರಿಗಿಳಿದು ಆಟವಾಡುವುದು ಕೂಡಾ ಸಹಜ.ಬಂದವರಿಗಂತೂ ಖುಷಿ ಅವರ ಊರಲ್ಲಿ ಇಂತಹ ಸಮುದ್ರ ಇಲ್ಲ ಹಾಗಾಗಿರ ಬಹುದು.ಆದರೆ ಇಂದು *"SDPI ಉಳ್ಳಾಲ ನಗರ ಸಮಿತಿ ಉಪಾಧ್ಯಕ್ಷರಾದಇಂತಿಯಾಝ್ ಕೋಟೆಪುರ,ಯುಕೆ ಎಫ್ ಮೋನು,ನಝೀರ್ ಕೋಡಿ"* ಮಧ್ಯಾಹ್ನದ ನಮಾಝ್ ಮುಗಿಸಿ ಉಳ್ಳಾಲ ಆರೋಗ್ಯ ಇಲಾಖೆ ಮತ್ತು ಸಹಾರ ಆಸ್ಪತ್ರೆಯಲ್ಲಿ ಜನ ಸೇರಿದ್ದನ್ನು ಕಂಡು ಕೂಡಲೇ ತಮ್ಮ ಕಾರನ್ನು ನಿಲ್ಲಿಸಿದಾಗ ಅಲ್ಲಿ ಮೂರು ಸಮುದ್ರ ಪಾಲಾದವರನ್ನು ಮಳಗಿಸಿ ಆಂಬ್ಯುಲನ್ಸ್ ಗಾಗಿ ಕಾಯುತ್ತಿದ್ದರು.ಕಾರ್ಯಪ್ರವರ್ತರಾದ ಇಂತಿಯಾಝ್ ಕೋಟೆಪುರ ತನ್ನ ಕಾರಿನಲ್ಲಿ ನೀರಿಗೆ ಬಿದ್ದ ಒಬ್ಬಳು ಯುವತಿಯನ್ನು ದೇರಳಕಟ್ಟೆಯ ಯಾನಪೋಯ ಆಸ್ಪತ್ರೆಗೆ ಕೊಂಡು ಹೋಗಿ ಯುವತಿಯ ಪ್ರಾಣ ರಕ್ಷಿಸುವಲ್ಲಿ ಕಾರ್ಯೋನ್ಮುಕರಾದರು.ಅವರೊಟ್ಟಿಗೆ *ಅಲ್ ಜಬ್ಬಾರ್ ಯು ಕೆ ಎಫ್ ಮೋನು,ನಝೀರ್ ಕೋಡಿ* ಮತ್ತು ಕೋಡಿ ಹಾಗೂ ಉಳ್ಳಾಲದ ನಾಗರಿಕರೂ ಇದ್ದರು.ಇವರ ಹಿಂದೆ ಎರಡು ಆಂಬ್ಯುಲನ್ಸ್ ನಮ್ಮೂರ ಧ್ವನಿ ಮತ್ತು ಇನ್ನೊಂದು ಆಂಬ್ಯುಲನ್ಸ್ ಕೂಡಾ ಕಾರ್ಯೋನ್ಮುಕರಾಗಿದ್ದರಿಂದ ಮೂವರು ಯುವತಿಯರ ಪ್ರಾಣ ರಕ್ಷಿಸುವಂತಾಯಿತು..

     ಇಂತಹ ಸಮಾಜಮುಖಿಗಳು ಇರುವ ನಮ್ಮ ಉಳ್ಳಾಲಕ್ಕೆ ಇಂತಿಯಾಝ್ ಕೋಟೆಪುರ,ಅಲ್ ಜಬ್ಬಾರ್,ಯು ಕೆ ಎಫ್ ಮೋನು,ನಝೀರ್ ಕೋಡಿ ಇನ್ನಿತರರು ಜನ ಮೆಚ್ಚುಗೆಗೆ ಪಾತ್ರರಾದರು.ಎಲ್ಲರಿಗೂ ಅಭಿನಂಧನೆಗಳು.....

   ಆ ಮೂವರು ಯುವತಿಯರು ಆಸ್ಪತ್ರೆಯ ಚಿಕಿತ್ಸೆಯಲ್ಲಿದ್ದಾರೆ.ಅವರಿಗಾಗಿ ಪ್ರತ್ಯೇಖ ದುಆ ಮಾಡಿರಿ...

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×