SDPI ಗಂಜಿಮಠ ಗ್ರಾಮ ಸಮಿತಿ ವತಿಯಿಂದ ಮಳಲಿಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ


ಗಂಜಿಮಠ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗಂಜಿಮಠ ಗ್ರಾಮ ಸಮಿತಿ ವತಿಯಿಂದ 78ನೇ  ಸ್ವಾತಂತ್ರ್ಯೋತ್ಸ ಕಾರ್ಯಕ್ರಮವು " ಹಸಿವು ಮತ್ತು ಭಯ ಕೊನೆಗೊಳ್ಳಲಿ, ನೈಜ ಜನಾಧಿಪತ್ಯ ಸ್ಥಾಪನೆಯಾಗಲಿ." ಎಂಬ ಘೋಷ ವಾಕ್ಯದೊಂದಿಗೆ ಮಳಲಿ ಪೇಟೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಎಸ್.ಡಿ.ಪಿ.ಐ ಗಂಜಿಮಠ ಗ್ರಾಮ ಸಮಿತಿ ಅಧ್ಯಕ್ಷರಾದ ಝಕಿರ್ ಮಳಲಿ ಧ್ವಜಾರೋಹಣ ನೆರವೇರಿಸಿದರು, ಎಸ್.ಡಿ.ಪಿ.ಐ ಗುರುಪುರ ಬ್ಲಾಕ್ ಅದ್ಯಕ್ಷರಾದ ಏ.ಕೆ ರಿಯಾಝ್ ಅಡ್ಡೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು,

ಎಸ್.ಡಿ.ಪಿ.ಐ ಗಂಜಿಮಠ ಗ್ರಾಮ ಸಮಿತಿ ಕಾರ್ಯದರ್ಶಿ ಇರ್ಫಾನ್ ಗಂಜಿಮಠ ಸ್ವಾಗತಿಸಿ ವಂದಿಸಿದರು, ಎಸ್.ಡಿ.ಪಿ.ಐ ಮಳಲಿ ಬ್ರಾಂಚ್ ಕಾರ್ಯದರ್ಶಿ ಅಝೀಝ್ ಮೊಗರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ

ಗುರುಪುರ ಬ್ಲಾಕ್ ಸಮಿತಿ ಸದಸ್ಯರಾದ ಸಾಬಿಕ್ ಅಡ್ಡೂರು, ಝುಬೈರ್ ಮಳಲಿ, ಗ್ರೀನ್ ಸ್ಟಾರ್ ಕ್ಲಬ್ ಮಳಲಿ ಇದರ ಅಧ್ಯಕ್ಷರಾದ ಫಯಾಝ್ ಮಳಲಿ, ಊರಿನ ಹಿರಿಯರಾದ ಪ್ರೇಮಚಂದ್ರ ಉಪಸ್ಥಿತರಿದ್ದರು.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×