ಅಡ್ಡೂರು - ಪೊಳಲಿ ಸೇತುವೆ: ಬಸ್, ಲಾರಿ ಸಂಚಾರ ಬಂದ್, ಪ್ರಯಾಣಿಕರಿಗೆ ಪರ್ಯಾಯ ಮಾರ್ಗದ ಒತ್ತಾಯ



ಮಂಗಳೂರು :ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿ, ಮಂಗಳೂರು -ಬಂಟ್ವಾಳ ತಾಲೂಕು ಗಳನ್ನು ಸಂಪರ್ಕಿಸುವ ಅಡ್ಡೂರು -ಪೊಳಲಿ ಸೇತುವೆಯಲ್ಲಿ ಇಂದಿನಿಂದ ಘನ ವಾಹನ ಗಳಾದ ಬಸ್ಸು, ಲಾರಿ, ಟೆಂಪೋಗಳ ಸಂಚಾರ ಸಂಪೂರ್ಣ ಬಂಧ್ ಆಗಿದೆ, ಇಂದು ಘನ ವಾಹನ ಸಂಚರಿಸದಂತೆ ಗೇಟ್ಅಳವಡಿಸಲಾಗಿದ್ದು ಪ್ರಯಾಣಿಕರು ಪೊಳಲಿಯಿಂದ ಅಡ್ಡೂರಿಗೆ ಸೇತುವೆಯಲ್ಲಿ ನಡೆದುಕೊಂಡು ಬರುತ್ತಿರುವ ದೃಶ್ಯ ಕಂಡುಬರುತಿದೆ.. 

ಜಿಲ್ಲಾಧಿಕಾರಿ ಗಳ ಹಾಗೂ ಹೆದ್ದಾರಿ ಪ್ರಾಧಿಕಾರದ ಈ ತಕ್ಷಣದ ಆದೇಶ ದಿಂದಾಗಿ ಖಾಸಗಿ ಬಸ್ಸು ಮಾಲಕರು, ಪ್ರಯಾಣಿಕರು, ಹಾಗೂ ಶಾಲಾ ಬಸ್ಸುಗಳು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. 

ಜಿಲ್ಲಾಧಿಕಾರಿಯವರು ಈ ಆದೇಶದಲ್ಲಿ ಸೇತುವೆಯ ಕಾಮಗಾರಿಯನ್ನು, ದುರಸ್ಥಿಯನ್ನು ಯಾವಾಗ ಕೊನೆಗೂಳಿಸುತ್ತೇವೆ ಎಂಬ ಸಮಯ ನಿರ್ಣಯ ಮಾಡದಿರುವುದರಿಂದ ಸಾರ್ವಜನಿಕರು ಗೊಂದಲಕ್ಕಿಡಾಗಿದ್ದಾರೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×