ಮಂಗಳೂರು ಮೀನು ಮಾರುಕಟ್ಟೆಯ ಕಮಿಷನ್ ಏಜೆಂಟರ ಸಂಘದ ವತಿಯಿಂದ ವಿಶೇಷ ಸನ್ಮಾನ ಮಾಡಲಾಯಿತು.ನಿನ್ನೆ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಸರಿಸುಮಾರು 81 ವರ್ಷದ ಅಬ್ದುಲ್ ಖಾದರ್ (ಪೊಂಕಯಿ ಕಾದರ್) ಎಂಬವರೇ ಈ ಸನ್ಮಾನಕ್ಕೆ ಅರ್ಹರಾದವರು.ವಿಶೇಷ ಏನೆಂದರೆ ಮಂಗಳೂರು ಮೊದಲು ಮೀನು ಮಾರುಕಟ್ಟೆ ರೂಪವಾಣಿ ಟಾಕೀಸು ಬಲಿ ಇತ್ತು,ತದನಂತರ ಸ್ಟೇಟ್ ಬ್ಯಾಂಕ್ ಪಕ್ಕದ ಮಾರುಕಟ್ಟೆಯಲ್ಲೂ,ಈಗ ಇರುವ ಸೌತ್ ವಾರ್ಫ್ ದಕ್ಕೆಯ ಮಾರುಕಟ್ಟೆಯಲ್ಲಿ ಬರೊಬ್ಬರಿ 55 ವರ್ಷ ದುಡಿದ ಖ್ಯಾತಿ ಇವರಿಗಿದೆ.ಯಾರ ಮುಂದೆಯೂ ಕೈ ಚಾಚದೇ ಯಾರಿಗೂ ಡೊಗ್ಗು ಸಲಾಂ ಹಾಕದೇ ಎಲ್ಲರಲ್ಲೂ ಪ್ರೀತಿ ವಾತ್ಸಲ್ಯದಿಂದ ಮಾತನಾಡುತ್ತಾ ಎಲ್ಲರಲ್ಲೂ ಹಾಸ್ಯಮಯವಾಗಿ ನಯವಾಗಿ ಸಹೋದರತ್ವ ತೋರಿಸುವ ಒಬ್ಬ ಪ್ರಾಮಾಣಿಕ ದುಡಿತಗಾರ.ಇವರ ಮಕ್ಕಳು ವ್ಯಾಪಾರ ರಂಗದಲ್ಲಿದ್ದರೂ ಅವರಿಗೆ ಭಾರವಾಗದೇ ತನ್ನ ಪಾಡು ತನಗೆ ಸಾಕು ಎಂಬ ಹೆಗ್ಗಲಿಕೆಗೆ ಪಾತ್ರರಾದವರು ಈ ಖಾದಿರಾಕನವರು.
ನಾವು ನೋಡಿದ ಹಾಗೆ ಸನ್ಮಾನ ಪ್ರಶಂಸೆ ಎಲ್ಲವೂ ಕೊಡುವುದು ರಾಜಕಾರಣಿಗಳಿಗೆ,ಧಾರ್ಮಿಕ ನೇತಾರರಿಗೆ,ಇಲ್ಲದಿದ್ದಲ್ಲಿ ಬರಹಗಾರ,ಹೋರಾಟಗಾರ ಹೀಗೆ ಹಲವು ರೀತಿಯಲ್ಲಿ ಸಮಾಜದಲ್ಲಿ ಗುರುತಿಸುವವರಿಗೆ ಮಾತ್ರ ಅದರಲ್ಲೂ ಕೆಲವರು ನಿಷ್ಟಾವಂತರು ಇಲ್ಲ ಹೆಸರಿಗೋಸ್ಕರ ಶ್ರೀಮಂತರನ್ನು ಸನ್ಮಾನಿಸುವುದು ಇಲ್ಲಿಯ ವಾಡಿಕೆ ಆಗಿ ಹೋಗಿದೆ.ಆದರೆ ನಿನ್ನೆಯ ಸನ್ಮಾನ ಮಾತ್ರ ಮೆಚ್ಚುವಂತಹದ್ದು.ಈ ಸನ್ಮಾನ ದುಡಿಯುವವರ ಹೆಸರಿಗೆ ಪ್ರಯತ್ನ ಪಟ್ಟ ಪ್ರತಿಯೊಬ್ಬರಿಗೂ ಪ್ರಶಂಸೆ ಕೊಡುವಂತದ್ದೇ.ಇದರಲ್ಲಿ ಮಂಗಳೂರು ಮೀನು ಮಾರುಕಟ್ಟೆಯ ಕಮಿಷನ್ ಏಜೆಂಟ್ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನೂ ಎಲ್ಲರೂ ಮೆಚ್ಚಿದ್ದಾರೆ.ಮೊಂದೊಂದು ದಿನ ಇಂತಹ ವ್ಯಕ್ತಿಗಳನ್ನು ಹುಡುಕಿ ಸನ್ಮಾನಿಸುವಂತೆ ಆಗಲಿ ಮತ್ತು ಇಡೀ ಸಮಾಜಕ್ಕೆ ಇದೊಂದು ಪ್ರೇರಣೆಯಾಗಲಿ,ಮಾರ್ಗದರ್ಶನವಾಗಲಿ ಎಂದು ನಾವೆಲ್ಲರೂ ಹಾರೈಸೋನ.


