ವಿನಯ ಕುಲಕರ್ಣಿ ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ
ದಿನಾಂಕ -27-7-2024 ಶನಿವಾರ ದಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸನ್ಮಾನ್ಯ ಶಾಸಕರು
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿನಯ್ ಕುಲಕರ್ಣಿ ಯವರು ಮಾತನಾಡಿ .
ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ಅಧಿಕಾರ ಹುಡುಕಿ ಬರುತ್ತದೆ. ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳ ಬೇಕು. ಯುವಕರು ಪಕ್ಷಕ್ಕೆ ಆಸ್ತಿ. ಅವರು ಪಕ್ಷದಲ್ಲಿ ಸೇವಾ ಮನೋಭಾವನೆ ಯೊಂದಿಗೆ ಗುರುತಿಸಿಕೊಂಡರೆ ಅದುವೇ ದೊಡ್ಡ ಆಸ್ತಿ. ಎಲ್ಲರೂ ಒಟ್ಟು ಸೇರಿ ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷರು, ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ವಿನಯ್ ಕುಲಕರ್ಣಿ ರವರು ಇಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.
ಪ್ರತೀ ಜಿಲ್ಲೆಗೆ ಕಾರ್ಯಕ್ರಮ ನಿಮಿತ್ತ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ಪರಿಪಾಠ ಇಟ್ಟುಕೊಂಡಿದ್ದೇನೆ. ಆದ್ದರಿಂದ ಇಲ್ಲಿ ಬಂದಿದ್ದೇನೆ. ಯುವ ಕಾಂಗ್ರೆಸ್ ನಲ್ಲಿ ಅನೇಕ ವರ್ಷಗಳ ಕಾಲ ದುಡಿದ ಪರಿಣಾಮ ನನಗೆ ಪಕ್ಷದಲ್ಲಿ ಈ ಸ್ಥಾನ ದೊರೆತಿದೆ ಎಂದರು .
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ರಮೇಶ್ ಶೆಟ್ಟಿ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮೂಡ ಅಧ್ಯಕ್ಷರಾದ ಶ್ರೀ ಸದಾಶಿವ ಉಳ್ಳಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಕಾರ್ಯಕ್ರಮದ ರೂವಾರಿಗಳು ಬ್ಲಾಕ್ ಹಿಂದುಳಿದ ವರ್ಗದ ಉಪಾಧ್ಯಕ್ಷರು ಶ್ರೀ ಪ್ರಕಾಶ್ ಕುಂಪಲ, ಕುಲಕರ್ಣಿ ಅವರ ಧರ್ಮಪತ್ನಿ ಶ್ರೀಮತಿ ಕುಲಕರ್ಣಿ, ಕಾಂಗ್ರೆಸ್ ವೀಕ್ಷಕರಾದ ಟಿ. ಕೆ. ಸುಧೀರ್, ಜಿಲ್ಲಾ ಕಾಂಗ್ರೆಸ್ ನಿಗಮದ ಸದಸ್ಯರಾದ ರಹಿಮಾನ್ ಕೋಡಿಜಾಲ್, ಚಂಚಲಾಕ್ಷಿ , ದೇವಕಿ ಉಳ್ಳಾಲ್, ಸುಹಾಸಿನಿ ಬಬ್ಬು ಕಟ್ಟೆ, ಮಹಿಳಾ ಅಧ್ಯಕ್ಷೆ ಚಂದ್ರಿಕಾ ರೈ, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಕೌನ್ಸಿಲರ್ ಆಗಿರುವ ಮೊಹಮದ್ ಮುಕ್ಕಚೇರಿ, ವಿವಿಧ ಘಟಕದ ಅಧ್ಯಕ್ಷರಾದ ದೀಪಕ್ ಸಿಲಾರ್, ಪುರುಷೋತ್ತಮ ಶೆಟ್ಟಿ, ಮನ್ಸೂರ್ ಉಳ್ಳಾಲ್ ಹಾಗೂ ಬ್ಲಾಕ್ ಕಾಂಗ್ರೆಸ್ ನ ಪದಾಧಿಕಾರಿಗಳು, ವಲಯ ಕಾಂಗ್ರೆಸ್ ಅಧ್ಯಕ್ಷರುಗಳು, ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರುಗಳು, ಪಕ್ಷದ ಅನೇಕ ಮುಖಂಡರುಗಳು, ಹಲವಾರು ಮಂದಿ ಕಾರ್ಯಕರ್ತರುಗಳು ಭಾಗವಹಿಸಿರುತ್ತಾರೆ. ಬ್ಲಾಕ್ ಉಪಾಧ್ಯಕ್ಷರಾದ ಮುಸ್ತಫಾ ಸ್ವಾಗತಿಸಿದರು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಕೆ ಅಬ್ದುಲ್ ರಹಿಮಾನ್ ಕೋಡಿಜಾಲ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು .
