ಆಗಸ್ಟ್ 1ರಿಂದ 19 ಕೆ.ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಏರಿಕೆ: ಇಂದಿನಿಂದಲೇ ಹೊಸ ದರ ಅನ್ವಯ!!

 


ನವದೆಹಲಿ: ದೇಶಾದ್ಯಂತ 19 ಕೆ.ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ಏರಿಕೆ ಮಾಡಲು ಆಯಿಲ್ ಮಾರ್ಕೆಂಟಿಂಗ್ ಕಂಪನಿಗಳು ನಿರ್ಧರಿಸಿದ್ದು, ಆಗಸ್ಟ್ 1ರಿಂದಲೇ ಈ ಹೊಸ ದರ ಅನ್ವಯವಾಗಲಿದೆ.

19 ಕೆ.ಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 8.50 ರೂಪಾಯಿ ಏರಿಕೆ ಮಾಡಲಾಗಿದೆ. 14 ಕೆಜಿಯ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಜನರು ನೆಮ್ಮದಿ ಪಡುವಂತಿಲ್ಲ, ಯಾವುದೇ ಸಮಯದಲ್ಲಾದರೂ ಗೃಹ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ಪ್ರಕಾರ ಇಂದಿನಿಂದ 19 ಕೆ.ಜಿ LPG ಸಿಲಿಂಡರ್ ದರದಲ್ಲಿ 8.50 ರೂಪಾಯಿ ಏರಿಕೆಯಾಗಿದೆ.

ದೆಹಲಿಯಲ್ಲಿ ₹1652.50, ಕೋಲ್ಕತ್ತಾದಲ್ಲಿ ₹1764.50, ಚೆನೈಯಲ್ಲಿ ₹1817, ಬೆಂಗಳೂರಿನಲ್ಲಿ ₹1732.50 ಸಿಲಿಂಡರ್ ದರ ಇದೆ.


ನವೀನ ಹಳೆಯದು
WhatsApp Join our 'Shan Media News' WhatsApp group - Join Now ×