ಗುರುಪುರ : ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದ ಗುಡ್ಡೆಯ ಜಯಜೋಗಿಯವರ ಮನೆ, ಅಣೆಬದಿ ಅಝೀಝ್ ರವರ ಮನೆ, ಬಂಗ್ಲೆಗುಡ್ಡೆ ಶಿವದಾಸ ಮತ್ತು ಇಮ್ತಿಯಾಝ್ ರವರ ಮನೆ ಹಾಗೂ ಬಂಗ್ಲೆಗುಡ್ಡೆ ಗುರುಪುರ ಸಂಪರ್ಕಿಸುವ ರಸ್ತೆಯ ಬದಿ ಜರಿದು ರಸ್ತೆ ಮತ್ತು ಮನೆಗಳು ಬೀಳುವ ಭೀತಿಯಲ್ಲಿ ಜನರಿದ್ದಾರೆ. ಹಲವಾರು ಬಾರಿ ಮನವಿ ಕೊಟ್ಟ ನಂತರ ಕಟಾಚಾರಕ್ಕೆ ಭೇಟಿ ನೀಡಿ ಪರಿಹಾರವನ್ನು ಕೊಡುವುದಾಗಿ ಭರವಸೆಯನ್ನು ಕೊಟ್ಟು ಯಾವುದೇ ಪರಿಹಾರವನ್ನು ಮಾಡದೆ ಕೇವಲ ಕೋಮು ಪ್ರಚೋದನೆ ಮಾಡಿ ಜನರನ್ನು ಮಂಗ ಮಾಡುತ್ತಿರುವ ಶಾಸಕ ಭರತ್ ಶೆಟ್ಟಿಯವರ ಈ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಸ್.ಡಿ.ಪಿ.ಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಗುರುಪುರ ರವರು ಅನಾಹುತ ಆಗಿ ಜೀವಹಾನಿ ಆಗುವ ಮುನ್ನ ಎಚ್ಚೆತ್ತುಕೊಂಡು ಇದರ ಬಗ್ಗೆ ಶೀಘ್ರವೇ ಕ್ರಮ ವಹಿಸಬೇಕೆಂದು ಸಂಭಂದಪಟ್ಟ ಅಧಿಕಾರಿಗಳಲ್ಲಿ ಮತ್ತು ಶಾಸಕರಲ್ಲಿ ಅಗ್ರಹಿಸಿದ್ದಾರೆ.
ಪ್ರಚೋದನೆಯ ಹೇಳಿಕೆಯನ್ನು ನೀಡಿ ಕಾಲಹರಣ ಮಾಡುವ ಬದಲು ಕ್ಷೇತ್ರದ ಜನರ ಸಂಕಷ್ಟದ ಮೇಲೆ ಗಮನ ಹರಿಸಿ :SDPI
bySHAN MEDIA NEWS
•
