ಕಾಸರಗೋಡು: ವಯನಾಡ್ ಭೂ ಕುಸಿತ ದುರಂತ ಸ್ಥಳಕ್ಕೆ ತೆರಳುತ್ತಿದ್ದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ವಾಹನ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.
ದುರಂತ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಮಂಜೇರಿ ಬಳಿ ಸಚಿವೆಯ ವಾಹನ ಎರಡು ದ್ವಿಚಕ್ರ ವಾಹಕ್ಕೆ ಢಿಕ್ಕಿಯಾಗಿದ್ದು, ಸಚಿವೆ ಸಹಿತ ದ್ವಿಚಕ್ರ ವಾಹನದಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವೀಣಾ ಜಾರ್ಜ್ ಕೈಗೆ ಗಾಯಗಳಾಗಿದ್ದು,, ಬೈಕ್‌ನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದೆಯೆಂದು ಹೇಳಲಾಗುತ್ತಿದೆ.
