ಇರಾನ್ | ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೇಹ್ ಹತ್ಯೆ

 


ಪ್ಯಾಲೆಸ್ಟೈನ್ ಹೋರಾಟಗಾರ ಗುಂಪು ಹಮಾಸ್’ನಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥರಾದ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್‌’ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮೂಲದ ಪ್ರೆಸ್ ಟಿವಿ ವರದಿ ಮಾಡಿದೆ.

ಘಟನೆಯಲ್ಲಿ ಅವರ ಅಂಗ ರಕ್ಷಕ ಕೂಡ ಹತರಾಗಿದ್ದಾರೆ ಎಂದು ಇರಾನಿನ ಪ್ರೆಸ್ ಟಿವಿ ವರದಿ ಮಾಡಿದ್ದು ಇನ್ನು ಕೂಡ ಅಧಿಕೃತಗೊಂಡಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇರಾನ್ ಅಧ್ಯಕ್ಷರಾಗಿ ಚುನಾಯಿತರಾದ ಮಸೂದ್ ಪೆಜೆಶ್ಕಿಯಾನ್ ಅವರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಟೆಹ್ರಾನ್‌ನಲ್ಲಿದ್ದರು.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×