ಮನೆ ಮಂದಿ ಪಾವಡ ದೃಶ್ಯವಾಗಿ ಪಾರು ತುಂದೆ ಬ್ರಹ್ಮತ ಗಾತ್ರದ ಮರ ಬಿದ್ದು ತೀರ್ವ ಹಾನಿ

 


ಬಂಟ್ವಾಳ : ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಅಬುಬಕ್ಕರ್ ಎಂಬವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆಗೆ ತೀವ್ರ ಹಾನಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.ಮನೆ ಮಂದಿಯೆಲ್ಲಾ ಮನೆಯೊಳಗೆ ಮಲಗಿದ್ದಾಗ ಘಟನೆ ನಡೆದಿದೆ. ಎಲ್ಲರೂ ಅದೃಷ್ಟವಶಾತ್ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಬೃಹತ್ ಗಾತ್ರದ ಸಾಗುವನಿ ಮರವೊಂದು ಬುಡ ಸಹಿತ ಕಿತ್ತು ಮನೆಯ ಮಾಡಿನ ಮೇಲೆ ಬಿದ್ದಿದೆ. ಹಂಚಿನ ಮನೆಯ ಮಾಡು ಗೋಡೆಗಳಿಗೆ ತೀವ್ರ ಹಾನಿಯಾಗಿದೆ. ಶಬ್ದ ಕೇಳಿ ಹೆದರಿದ ಮನೆಯವರು ತಕ್ಷಣ ಮನೆಯ ಹೊರಗಡೆ ಓಡಿ ಹೋಗಿದ್ದು ನಂತರ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×