ದಿನಾಂಕ 25-07-2024 ರ ಗುರುವಾರ ಸಂಜೆ ಮಲ್ಲೂರು ಅಂಚೆ ಕಚೇರಿ ಬಳಿ ಗುಡ್ಡ ಕುಸಿದಿದ್ದು, ಗುಡ್ಡ ಬಳಿಯಿದ್ದ ಮನೆಯೊಂದಕ್ಕೆ ಹಾನಿಯಾಗಿದೆ. ಗುಡ್ಡ ಕುಸಿದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 2021ರ ಜುಲೈ 26 ರಂದು ಇದೇ ಗುಡ್ಡ ಕುಸಿದು ಮನೆಮಂದಿಗೆ ಹಾನಿಯಾಗಿತ್ತು. ಹಾಗೂ ಮನೆಯು ಭಾಗಷಃ ಹಾನಿಯಾಗಿತ್ತು. ಆ ಘಟನೆ ನಡೆದು ಇಂದಿಗೆ 3 ವರ್ಷ ತುಂಬಿದ್ದು ಮತ್ತೆ ಎರಡನೇ ಬಾರಿ ಗುಡ್ಡ ಕುಸಿದಿರುವುದು ಮನೆಮಂದಿಯನ್ನು ಆತಂಕಕ್ಕೀಡು ಮಾಡಿದೆ.
ಘಟನಾ ಸ್ಥಳಕ್ಕೆ ಮಲ್ಲೂರು ಪಂಚಾಯತ್ ಉಪಾಧ್ಯಕ್ಷರಾದ ಇಲ್ಯಾಸ್ ಪಾದೆ ಭೇಟಿ ನೀಡಿ ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಎಸ್.ಡಿ.ಪಿ.ಐ ಮಲ್ಲೂರು ಗ್ರಾಮ ಸಮಿತಿ ಅಧ್ಯಕ್ಷರಾದ ಶಫೀಕ್ ಮಲ್ಲೂರು, ಎಸ್ ಡಿ ಪಿ ಐ ಮಲ್ಲೂರು ವಾರ್ಡ್ ಅಧ್ಯಕ್ಷರಾದ ಜಬ್ಬಾರ್ ಕಿನ್ನಿಮೇರ್ ಉಪಸ್ಥಿತರಿದ್ದರು.

ಮಲ್ಲೂರು ಪಂಚಾಯತ್ vice president

