ಮಂಗಳೂರು ವಿಧಾನಸಭಾ ಕ್ಷೇತ್ರದ (ಉಳ್ಳಾಲ) ಕಾರ್ಯಕರ್ತರುಗಳಿಗೆ ಹಾಗೂ ಮತದಾರ ಬಂದುಗಳಿಗೆ ಕೃತಜ್ಞತೆಗಳು

*ದ ಕ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾದ 🌷 ಶ್ರೀ ಪದ್ಮರಾಜ್ ಆರ್ ಪೂಜಾರಿ ಅವರ ಪರವಾಗಿ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಪ್ರತಿನಿಧಿಸುವ ಕ್ಷೇತ್ರ ಉಳ್ಳಾಲ ವ್ಯಾಪ್ತಿಯಲ್ಲಿ 33,000ಕ್ಕೂ ಅಧಿಕ ಮತವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಚಲಾಯಿಸುವಂತೆ ಕೆಲಸ ಮಾಡಿ ಜಿಲ್ಲೆಯಲ್ಲಿ ಅತ್ಯಧಿಕ ಲೀಡ್ ಕೊಡುವ ಮೂಲಕ ಮತ್ತಷ್ಟು ಗೌರವವನ್ನು ಹೆಚ್ಚಿಸಿರುವುದು ಬಹಳ ಸಂತಸವನ್ನುಂಟು ಮಾಡಿದೆ. ಕಳೆದ ಬಾರಿ ಮಂಗಳೂರು ಕ್ಷೇತ್ರದಲ್ಲಿ 2,75,000 ಅಂತರದಲ್ಲಿ ಸೋಲನ್ನು ಕಂಡು ನಿರಾಶರಾದ ಕಾರ್ಯಕರ್ತರು ಪ್ರಸಕ್ತ ಚುನಾವಣೆಯಲ್ಲಿ 1,48,000 ದಲ್ಲಿ ಸೋಲುವ ಮೂಲಕ ಅಂತರವನ್ನು ಕಡಿಮೆ ಮಾಡಲು ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ, ಕಾರ್ಯಕರ್ತರು ವಿಚಲಿತರಾಗದೆ ಧೈರ್ಯದಿಂದ ಕೆಲಸ ಮಾಡಬೇಕಾಗಿದೆ. ಮುಂದಿನ ದ ಕ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಜಯಗಳಿಸಲಿದ್ದಾರೆ ಎಂಬ ಆಶಾಭಾವನೆ ಯೊಂದಿಗೆ ನಾವೆಲ್ಲರೂ ಕಾರ್ಯಪ್ರವೃತ್ತ ರಾಗೋಣ, ಈ ಚುನಾವಣೆ ಯ ಯಶಸ್ಸಿನ ಹಿಂದೆ ಪಕ್ಷದ ರಾಜ್ಯ ವ್ಯಾಪ್ತಿಯ, ಜಿಲ್ಲಾ ವ್ಯಾಪ್ತಿಯ ಹಾಗೂ ಬ್ಲಾಕ್ ವ್ಯಾಪ್ತಿಯ ನಾಯಕರುಗಳು, ವೀಕ್ಷಕರುಗಳು, ಉಸ್ತುವಾರಿಗಳು, ಮುಂತಾದ ಅನೇಕರ ಪರಿಶ್ರಮವಿದೆ, ಮುಂದಿನ ದಕ್ಷಿಣ ಕನ್ನಡ ಲೋಕಸಭೆ ನಮ್ಮದೇ ಅಭ್ಯರ್ಥಿಗೆ ಜಯದೊರಕಲಿ.. ಎಂಬ ಆಶಾ ಭಾವನೆಯೊಂದಿಗೆ ಮುಂದಿನ ದಿನಗಳು ಎಲ್ಲರಿಗೂ ಒಳ್ಳೆಯದಾಗಲಿ. ಆದುದರಿಂದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ಸಿನ ಎಲ್ಲ ಪದಾಧಿಕಾರಿ ಗಳಿಗೂ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರಿಗೂ ಬ್ಲಾಕ್ ಮುಂಚೂಣಿ ಘಟಕದ ಎಲ್ಲ ಅಧ್ಯಕ್ಷ ಪದಾಧಿಕಾರಿಗಳಿಗೂ, ವಲಯ ಕಾಂಗ್ರೆಸಿನ ಎಲ್ಲ ಅಧ್ಯಕ್ಷ ಪದಾಧಿಕಾರಿಗಳಿಗೂ, ಮಹಿಳಾ ಕಾಂಗ್ರೆಸ್ ನ ಎಲ್ಲ ಅಧ್ಯಕ್ಷ ಪದಾಧಿಕಾರಿಗಳಿಗೂ, ಯುವ ಕಾಂಗ್ರೆಸ್ಸಿನ ಎಲ್ಲ ಅಧ್ಯಕ್ಷ ಪದಾಧಿಕಾರಿಗಳಿಗೂ, ಬ್ಲಾಕಿನ ಎಲ್ಲ ವೀಕ್ಷಕರಿಗೂ ಬ್ಲಾಕ್ ವ್ಯಾಪ್ತಿಯ ಎಲ್ಲ ಡಿಸಿಸಿ ಸದಸ್ಯರಿಗೂ, ಬೂತ್ ಮಟ್ಟದ ಎಲ್ಲ ಅಧ್ಯಕ್ಷ ಪದಾಧಿಕಾರಿಗಳಿಗೂ, ಎಲ್ಲಾ ಬಿ ಎಲ್ ಎ ಯವರಿಗೂ, ಬೂತ್ ಪೋಲಿಂಗ್ ಏಜೆಂಟರುಗಳಿಗೂ ಕಾಂಗ್ರೆಸ್ಸಿನ ಎಲ್ಲಾ ಹಿರಿಯ ಮುಖಂಡರಿಗೂ, ಬ್ಲಾಕ್ ಕಾಂಗ್ರೆಸಿನ ಮಾಜಿ ಅಧ್ಯಕ್ಷರುಗಳಿಗೂ ಪಕ್ಷದ ಎಲ್ಲ ಕಾರ್ಯಕರ್ತ ಮಿತ್ರರಿಗೂ, ಕಾಂಗ್ರೆಸ್ ಪಕ್ಷದ ಎಲ್ಲಾ ಅಭಿಮಾನಿಗಳಿಗೂ, ಹಿತೈಷಿಗಳಿಗೂ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಹಲವು ರೀತಿಯಲ್ಲಿ ಸಹಕರಿಸಿದ ಎಲ್ಲ ಮಹಾ ಜನತೆಗೂ ಮಿತ್ರರಿಗೂ ತುಂಬು ಹೃದಯದ "ಅಭಿನಂಧನೆಗಳು" ಹಾಗೂ ಹೃದಯ ತುಂಬಿದ "ಧನ್ಯವಾದಗಳು

*ಯುಟಿ ಇಫ್ತಿಕಾರ್ ಫರೀದ್, ಕಾರ್ಯಧ್ಯಕ್ಷರು, ಮೇಲುಸ್ತುವಾರಿ ಸಮಿತಿ ಮತ್ತು ಬಳಗ... ಮಂಗಳೂರು ವಿಧಾನಸಭಾ ಕ್ಷೇತ್ರ*

*ಶ್ರೀ ರಮೇಶ್ ಶೆಟ್ಟಿ ಬೋಳಿಯಾರು ಅಧ್ಯಕ್ಷರು*
*ಎಕೆ ಅಬ್ದುಲ್ ರಹಿಮಾನ್ ಕೋಡಿಜಾಲ್ ಪ್ರಧಾನ ಕಾರ್ಯದರ್ಶಿ, ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ*
ನವೀನ ಹಳೆಯದು
WhatsApp Join our 'Shan Media News' WhatsApp group - Join Now ×