ಬಜಾಲ್ ಅಂಡರ್ ಪಾಸ್ ಮತ್ತೆ ಭರ್ತಿ: ಮಳೆ ನೀರಿನಿಂದ ಸಂಚಾರ ಸ್ಥಗಿತ; 10-15 ವರ್ಷಗಳಿಂದ ಸಮಸ್ಯೆ ಜೀವಂತ; ಅಧಿಕಾರಸ್ಥರು ಮೌನ!

 


ಮಂಗಳೂರು :- ನಗರದ ಹೊರವಲಯದ ಪಡೀಲ್ ಸಮೀಪದ ಬಜಾಲ್ ನ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿದ್ದು, ಕಳೆದ 10-15 ವರ್ಷಗಳಿಂದ ಈ ಸಮಸ್ಯೆ ಜೀವಂತವಾಗಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ಬಜಾಲ್, ಜಲ್ಲಿಗುಡ್ಡೆ, ವೀರನಗರ, ವಿಜಯನಗರ, ಎಕ್ಕೂರು ಹೈವೇ,ಜಪ್ಪಿನ ಮೊಗರು ಕಡೆಗೆ ಪ್ರಯಾಣಿಸುವವರು ಇದೇ ಅಂಡರ್ ಪಾಸ್ ಮೂಲಕವೇ ಸಂಚರಿಸಬೇಕು. ಅಷ್ಟೇ ಅಲ್ಲದೆ ಜಂಕ್ಷನ್ ರೈಲ್ವೆ ಸ್ಟೇಷನಿಗೆ ಕೂಡ ಇದೇ ದಾರಿಯಾಗಿ ಸಾಗಬೇಕು. ಇದೀಗ ಸಂಚಾರ ಕಡಿತಗೊಂಡಿದೆ. ವಾಹನ ಕೆಟ್ಟು ನಿಂತಿದೆ. ಬಸ್ ಸಂಚಾರ ನಿಂತಿದೆ. ಜತೆಗೆ ಕಾಲ್ನಡಿಗೆಯಲ್ಲಿ ಕೂಡ ಈ ಅಂಡರ್ ಪಾಸ್ ಮೂಲಕ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿ ಎರಡೆರಡು ಪಂಪ್ ಅಳವಡಿಸಿ ನೀರು ಖಾಲಿ ಮಾಡುವ ಕ್ರಿಯೆ ನಡೆಯುತ್ತಿತ್ರು. ಪಂಪ್ ಗೆ ಬಾಡಿಗೆ ಮತ್ತು ಡೀಸೆಲ್ ಹಣವನ್ನು ಸ್ಥಳೀಯಾಡಳಿತ ಭರಿಸಬೇಕಾಗಿದೆ. ಅಂದ್ರೆ ನಮ್ಮ ನಿಮ್ಮ ತೆರಿಗೆ ಹಣವನ್ನು ನೀರು ಖಾಲಿ ಮಾಡಲು ಉಪಯೋಗಿಸುತ್ತಿದ್ದರು. ಈ ವರ್ಷವೂ ಅದರ ಪುನರಾವರ್ತನೆ ಆಗಲಿದೆ. ಸ್ಥಳೀಯ ಕಾರ್ಪೋರೇಟರ್ ಮಾತನಾಡುತ್ತಿಲ್ಲ. ಪಾಲಿಕೆ, ಜಿಲ್ಲಾಡಳಿತ ಮೌನವಾಗಿದೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×