ಮಡಿಕೇರಿಯ ಜೈನ್ ಗೇಟ್ ಹತ್ತಿರ ಕಾರು ಅಪಘಾತ ಅಪಾಯದಿಂದ ಪರಾದ ಮಜಿದ್ S D P I ಅಧ್ಯಕ್ಷ



ಮೊನ್ನೆ ಮೇ 11, ಶನಿವಾರ ಸಂಜೆ ಏಳು ಗಂಟೆಗೆ ಮಡಿಕೇರಿಯ ಜೈನ್ ಗೇಟ್ ಬಳಿ ನಾನು ಸಂಚರಿಸುತ್ತಿದ್ದ ಕಾರಿಗೆ ಕೆಎಸ್ಆರ್ಟಿಸಿ ಬಸ್ಸೊಂದು ಗುದ್ದಿದ ಕಾರಣ ಅಪಘಾತಕ್ಕೀಡಾಯಿತು. ನನಗಾಗಲಿ ಕಾರು ಚಲಾಯಿಸುತ್ತಿದ್ದ ಸಮೀರ್ ಗಾಗಲಿ ಯಾವುದೇ ತೊಂದರೆ ಆಗಲಿಲ್ಲ, ನನಗೆ ಕೈ ಬೆರಳಿನಲ್ಲಿ ಸಣ್ಣ ಫ್ಯಾಕ್ಚರ್ ಆಗಿದೆ, ಸಮೀರ್ ಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿವೆ. 

 ಅಪಘಾತದ ಸಂದರ್ಭದಲ್ಲಿ, ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ, ಹಲವಾರು ಪ್ರಯಾಣಿಕರು, ತಕ್ಷಣ ನಮ್ಮನ್ನ ಉಪಚರಿಸಿದ್ದಾರೆ ಮತ್ತು ಸಂತೈಸಿದ್ದಾರೆ, ಯಾವುದೇ ಗುರುತು ಪರಿಚಯ ಇಲ್ಲದಿದ್ದರೂ, ಮಾನವೀಯತೆ ದೃಷ್ಟಿಯಿಂದ, ನಮ್ಮನ್ನ ಉಪಚರಿಸಿದ್ದಾರೆ, ಹಲವು ಹೆಣ್ಣು ಮಕ್ಕಳು ತಾಯಿಯಂತೆ ಸಹೋದರಿಯಂತೆ ಉಪಚರಿಸಿದ್ದಾರೆ. ಅಪಘಾತ ಸ್ಥಳಕ್ಕೆ ತಕ್ಷಣ ತಲುಪಿದ ಮಡಿಕೇರಿಯ ನಗರಸಭಾ ಸದಸ್ಯ ಮನ್ಸೂರ್, ನಮ್ಮನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ, ದಾಖಲು ಮಾಡಿದ್ದಾರೆ, ಆಸ್ಪತ್ರೆಗೆ ಬಂದು ಸಹಕರಿಸಿದ ಪ್ರೀತಿ ತೋರಿದ ಎಸ್ ಡಿ ಪಿ ಐ ಕೊಡಗು ಜಿಲ್ಲಾ ನಾಯಕರು ಮತ್ತು ಇತರ ಕಾರ್ಯಕರ್ತರು, ಮಡಿಕೇರಿಯ ಹಲವಾರು ಸಾಮಾಜಿಕ ಕಾರ್ಯಕರ್ತರು ಇವರಿಗೆಲ್ಲಾ ನಾನು ಚಿರಋಣಿ.

 ಅಪಘಾತ ಗೊತ್ತಾದ ತಕ್ಷಣ ಮೈಸೂರಿನಿಂದ ತಕ್ಷಣ ಹೊರಟು ಬಂದು, ನಮ್ಮನ್ನು ಸಂತೈಸಿದ, SDPI ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಮೈಸೂರಿನ ಜಿಲ್ಲಾ ನಾಯಕರಾದ ಶಫಿ ಉಲ್ಲಾ, ಮನ್ಸೂರ್ ಖಾನ್, ಫಿರ್ದೋಸ್. ಕಾಂಗ್ರೆಸ್ ನಾಯಕರೂ ಕುಶಾಲನಗರ ಪುರಸಭೆಯ ಕೌನ್ಸಿಲರ್ರಾದ ಕಲೀಮುಲ್ಲಾ. ಫೋನ್ ಮೂಲಕ ಆರೋಗ್ಯ ವಿಚಾರಿಸಿದ ಎಲ್ಲಾ ಸಹೃದಯರು, ಮೈಸೂರಿನಲ್ಲಿ ನನ್ನ ಮನೆಗೆ ಬಂದು, ಆರೋಗ್ಯ ವಿಚಾರಿಸಿ ಪ್ರೀತಿ ತೋರಿದ ಎಲ್ಲಾ ಸಹೋದರರಿಗೂ, ಹೃತ್ಪೂರ್ವಕ ಧನ್ಯವಾದಗಳು.

 ಮಡಿಕೇರಿ ಆಸ್ಪತ್ರೆಯ ವೈದ್ಯರುಗಳು ಮತ್ತು ಸಿಬ್ಬಂದಿಗಳು,

 ಮೈಸೂರಿನಲ್ಲಿ ನಮಗೆ ಚಿಕಿತ್ಸೆ ನೀಡಿದ, ಡಾಕ್ಟರ್ ದೇವಂಶು ಗುಪ್ತ, ನನ್ನ ಅಳಿಯ ಡಾಕ್ಟರ್ ಇಕ್ರಂ, ಸಹೋದರ ಪುತ್ರಿ ಡಾಕ್ಟರ್ ಯಾಸ್ಮಿನ್, ಪ್ರಜ್ವಲ್ ಆಸ್ಪತ್ರೆಯ ನಾಗೇಂದ್ರರವರು,OT ಯ ಸಿಬ್ಬಂದಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×