Mangalore: ಅಪ್ರಾಪ್ತ ಬಾಲಕಿಗೆ ಮದುವೆ : ವರ್ಷ ತುಂಬುವುದರೊಳಗೆ ಗರ್ಭಿಣಿಯಾದ ಬಾಲಕಿ :ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲು



Mangalore: ಬಹು ಹಿಂದಿನಿಂದಲೂ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿರುವುದು ರೂಡಿಯಲ್ಲಿದೆ. ಆದರೆ ಬಾಲ್ಯ ವಿವಾಹ(Child marriage)ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಅಲ್ಪ ಮಟ್ಟಿಗೆ ಅದು ಕಡಿಮೆಯಾಗಿದೆ. ಆದರೂ ಪೂರ್ಣಪ್ರಮಾಣದಲ್ಲಿ ಅದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಅದರಂತೆಯೇ ಇದೀಗ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ಮುಸ್ಲಿಂ(Muslim)ಯುವಕನ ಮೇಲೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

2023ರ ಜೂನ್ 1ರಂದು ಮೋಂಟುಗೋಳಿ ನಿವಾಸಿ ಮೊಹಮ್ಮದ್ ಇಮ್ಮಿಯಾಜ್ ಎಂಬಾತ ಮುಡಿಪು ಹಾಲ್ ನಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದು, ಬಾಲಕಿಯ ಹೆತ್ತವರೇ ಆಕೆಯನ್ನು ಮದುವೆ ಮಾಡಿಕೊಟ್ಟಿದ್ದರು.

ಬಾಲಕಿ 2024ರ ಮಾರ್ಚ್ 27ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯಲ್ಲಿ (Hospital) ವಯಸ್ಸಿನ ದೃಢೀಕರಣದ ವೇಳೆ ಆಕೆ ಅಪ್ರಾಪ್ತೆ ಎಂಬುದು ತಿಳಿದುಬಂದಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಈ ಕುರಿತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿರಲಿಲ್ಲ.



ಆದರೆ ಮಗು ಮತ್ತು ತಾಯಿಗೆ ಸಂಬಂಧಿಸಿ ಸರ್ಕಾರದಿಂದ ಆಹಾರ ಪಡೆಯುವ ಸಲುವಾಗಿ ಸ್ಥಳೀಯ ಅಂಗನವಾಡಿಯಲ್ಲಿ ನೋಂದಣಿ ಮಾಡಿದ್ದು, ಈ ವೇಳೆ ಬಾಲಕಿಗೆ 18 ಪೂರ್ತಿಯಾಗದೆಯೇ ಮದುವೆ ಮಾಡಿದ್ದು ಅಪ್ರಾಪ್ತಳಾಗಿ ಗರ್ಭಿಣಿಯಾಗಿರುವುದಾಗಿ ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇದೀಗ ಇಲಾಖಾ ಅಧಿಕಾರಿಗಳ ಸೂಚನೆಯ ಮೇರೆಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದು ಎಫ್‌ಐಆರ್ ದಾಖಲಾಗಿದೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×