ಮಂಗಳೂರು ಮೇ 29 :ಮಂಗಳೂರಿನ ಕಂಕನಾಡಿ ಮಸೀದಿ ವಠಾರದಲ್ಲಿ ನಮಾಜ್ ಮಾಡಿದ ವಿಡಿಯೋವನ್ನು ಕಿಡಿಗೇಡಿಗಳು ವೈರಲ್ ಮಾಡಿ ರಸ್ತೆ ಯಲ್ಲಿ ನಮಾಜ್ ಮಾಡಿರುವುದಾಗಿ ಅಪಪ್ರಚಾರ ಮಾಡಿದ ವಿಡಿಯೋ ವನ್ನು ಯಾವುದೇ ಸರಿಯಾದ ತನಿಖೆ ಮಾಡದೆ ಸುಮೊಟೊ ಕೇಸ್ ದಾಖಲಿಸಿದನ್ನು ಖಂಡಿಸಿದ ದಕ್ಷಿನ ಕನ್ನಡ ಜಿಲ್ಲಾ ಅಲ್ಪ ಸಂಖ್ಯಾತ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ.ಅವರ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಕಮಿಷನ್ ರವರಿಗೆ ನೈಜ ವಿಷಯ ವನ್ನು ಮನವರಿಕೆ ಮಾಡಿ ಸುಮೊಟೊ ಕೇಸ್ ಹಾಕಿರುವ ಬಗ್ಗೆ ಕಮಿಷನ್ ರವರನ್ನು ತರಾಟೆ ತೆಗೆದು ಇನ್ನೂ ಮುಂದೆ ಇಂತಹ ತಪ್ಪು ಗಳು ನಡೆಯ ಬಾರದು ಅಂತ ಹೇಳಿ ಕೂಡಲೇ ದಾಖಲೆ ಮಾಡಿದ ಕೇಸ್ ಹಿಂತೆಗೆಯ ಬೇಕು ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಕಮಿಷನ್ ಅವರಿಗೆ ಎಚ್ಚರಿಕೆ ನೀಡಲಾಯಿತು ನಿಯೋಗ ದಲ್ಲಿ ಮಾಜಿ ಮೇಯರ್ ಆಶ್ರಫ್ ಹಾಗೂ ಅಲ್ಪ ಸಂಖ್ಯಾತ ಘಟಕದ ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು
Reported by :- Haneef Bava







