ಉಳ್ಳಾಲ ಊರೂಸ್ ಪ್ರಯುಕ್ತ ಉಳ್ಳಾಲ ಮೇಲಂಗಡಿ ದರ್ಗಾ ಕಾನ್ಕ್ರೀಟ್ ರಸ್ತೆಯ ಉದ್ಘಾಟನೆ ಎಪ್ರಿಲ್ 09 /2025 ರಂದು ವಿಜೃಂಭಣೆಯಿಂದ ನೆರವೇರಿತು

 


ಮೆಲಂಗಡಿ: ನಗರ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯತ್ತ ಒಂದು ಹೆಜ್ಜೆ ಇಡುವಂತೆ, ಎಪ್ರಿಲ್ 09ರಂದು ಉಳ್ಳಾಲ ಊರೂಸ್ ಪ್ರಯುಕ್ತ ಮೆಲಂಗಡಿ ದರ್ಗಾ ರಸ್ತೆಯ ಕಾನ್ಕ್ರೀಟ್ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ

SDPI ಮೆಲಂಗಡಿ ಘಟಕದ ಅಧ್ಯಕ್ಷ ಮುಸ್ತಫಾ ಕೊಟ್ಟಾರ,

SDPI ನಗರಸಭಾ ಸದಸ್ಯೆ ಖಮರುನ್ನಿಸಾ ನಿಜಾಮ್, ನಿಜಾಮ್ ಉಳ್ಳಾಲ್ , SDPI ನಗರಸಭಾ ಸದಸ್ಯರು ರುಕಿಯ ಇಕ್ಬಲ್, SDPI ಮೇಲಂಗಡಿ ಘಟಕ ಉಪಾಧ್ಯಕ್ಷ ಸರ್ಫರಾಜ್, SDPI ಉಳ್ಳಾಲ ನಗರ ಸಮಿತಿ  ಜೊತೆ ಕಾರ್ಯದರ್ಶಿ ಎ.ಎಂ. ರಹಮತ್ ಉಳ್ಳಾಲ್, SDPI ಉಳ್ಳಾಲ ನಗರಸಮಿತಿ ಸದಸ್ಯರು ಸಬೀಲ್ ಅಹ್ಮದ್ ಪಾಲ್ಗೊಂಡಿದ್ದರು.


ಉದ್ಘಾಟನೆ: ಖಮರುನ್ನಿಸಾ ನಿಜಾಮ್ ಅವರಿಂದ

ಕಾರ್ಯಕ್ರಮವನ್ನು ಅಧಿಕೃತವಾಗಿ ಖಮರುನ್ನಿಸಾ ನಿಜಾಮ್ ಅವರು ಉದ್ಘಾಟಿಸಿದರು ಹಾಗೂ ನಿಜಾಮ್ ಉಳ್ಳಾಲ್ ಜನರನ್ನು ಉದ್ದೇಶಿಸಿ ಮಾತನಾಡಿದರು:

“ಈ ರೀತಿ ಸ್ಥಳೀಯ ಅಭಿವೃದ್ಧಿ ಕಾರ್ಯಗಳು ಜನತೆಯ ನಿತ್ಯಜೀವನಕ್ಕೆ ಅನುಕೂಲವಾಗಬೇಕು ಎಂಬುದು ನಮ್ಮ ಉದ್ದೇಶ. ಇದೊಂದು ಮಾತ್ರವಲ್ಲ, ಮುಂದೆಯೂ ಇಂತಹ ಅನೇಕ ಕಾರ್ಯಗಳನ್ನು ಕೈಗೊಳ್ಳಲಾಗುವುದು,” ಎಂದು ಹೇಳಿದರು.


ಕಾರ್ಯಕ್ರಮದ ಆರಂಭದಲ್ಲಿ ಸಬೀಲ್ ಅಹ್ಮದ್ ಅವರು ಅತಿಥಿಗಳಿಗೆ ಹೃದಯಪೂರ್ವಕ ಸ್ವಾಗತ ಸಲ್ಲಿಸಿದರು.


ಸಬೀಲ್ ಅಹ್ಮದ್ 

ಅಂತಿಮವಾಗಿ ಕಾರ್ಯಕ್ರಮದ ಎಲ್ಲಾ ಅತಿಥಿಗಳು, ಸಂಘಟಕರು ಮತ್ತು ಸ್ಥಳೀಯ ಜನತೆಗೆ ಧನ್ಯವಾದ ಅರ್ಪಿಸಿದರು.


ಈ ಕಾರ್ಯಕ್ರಮದಲ್ಲಿ ನಿಜಾಮ್ ಉಳ್ಳಾಲ್ ರವರನ್ನು ಸ್ಥಳೀಯರಾದಂತಹ, ಹಾಜಿ ಬಿಲಾಲ್ ಮುಹಮ್ಮದ್, ಫಾರೂಕ್ ಮೇಲಂಗಡಿ, ಹಮೀದ್ ಮೇಲಂಗಡಿ, ಅನೀಸ್ ಬಿಲಾಲ್, ಶಾಲು ಹೊದಿಸಿ ಸನ್ಮಾನಿಸಿದರು. ಈ ಉದ್ಘಾಟನೆಗೆ ಸಾರ್ವಜನಿಕರು ಪಕ್ಷದ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಸೇರಿ ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×