Zika virus: ರಾಜ್ಯದಲ್ಲಿ ಹೆಚ್ಚಾಗ್ತಿದೆ ಝಿಕಾ ವೈರಸ್; 2 ಜಿಲ್ಲೆಗಳಲ್ಲಿ 7 ಕೇಸ್ ಪತ್ತೆ, ಸರ್ಕಾರದಿಂದ ಅಲರ್ಟ್



ಬೆಂಗಳೂರು: ರಾಜ್ಯದಲ್ಲಿ ಡೆಂಘಿ (Dengue) ಆಯ್ತು, ಈಗ ಝಿಕಾ ವೈರಸ್ (Zika virus) ಭೀತಿ ಶುರುವಾಗಿದೆ. ಝಿಕಾ ವೈರಸ್ ಭೀತಿ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ (Karnataka Health Department) ಎಚ್ಚೆತ್ತುಕೊಂಡಿದೆ. ಈಗಾಗಲೇ ರಾಜ್ಯದ 2 ಜಿಲ್ಲೆಗಳಲ್ಲಿ 7 ಝಿಕಾ ವೈರಸ್ ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಈಡೀಸ್ ಸೊಳ್ಳೆಯಿಂದ ಹರಡುವ ಝಿಕಾ ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗಂಧೆಗಳು ಕಾಣಿಸಿಕೊಳ್ಳೋದು ಝಿಕಾ ಗುಣಲಕ್ಷಣಗಳಾಗಿದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದೆ.

ಝಿಕಾ ವೈರಸ್ ಕಂಡು ಬಂದ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಕಂಟೈನ್ವೆಂಟ್ ಝೋನ್ ಎಂದು ಪರಿಗಣಿಸಲಾಗುತ್ತದೆ. ಝಿಕಾ ವೈರಸ್ ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ವೈರಸ್‌ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಾರ್ವಜನಿಜರಿಗೆ ಮನವಿ ಮಾಡಿದ್ದಾರೆ.


ಆರೋಗ್ಯ ಸಚಿವರು ಹೇಳಿದ್ದೇನು?

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಆಗಸ್ಟ್​ 4ರಿಂದ 15ರ ವೇಳೆಗೆ ಬೆಂಗಳೂರಿನ ಜಿಗಣಿಯಲ್ಲಿ 5 ಝಿಕಾ ಪ್ರಕರಣ ಪತ್ತೆಯಾಗಿದೆ. ಐದು ಜನರಲ್ಲಿ ಝಿಕಾ ವೈರಸ್ ಕಂಡು ಬಂದಿದೆ. ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಜಿಗಣಿಯಲ್ಲಿ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಐವರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಝಿಕಾ ವೈರಸ್ ಕಂಡು ಬಂದಿರುವ ರೋಗಿಗಳ ಕುಟುಂಬಸ್ಥರ ಸ್ಯಾಂಪಲ್ ಪಡೆದಿರುವ ವೈದ್ಯರು, ಟೆಸ್ಟ್​ಗೆ ಕಳುಹಿಸಿದ್ದಾರೆ. ಆದರೆ ಆತಂಕ ಪಡುವ ಅಗತ್ಯವಿಲ್ಲ, ಆದರೆ ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಅವರಿಗೆ ಹುಟ್ಟುವ ಮಗುವಿನ ಮೇಲೆ ಇದು ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುತ್ತೆ ಎಂದು ಹೇಳಿದ್ದಾರೆ.


ಝಿಕಾ ವೈರಸ್‌ನಿಂದ ರಕ್ಷಿಸಿಕೊಳ್ಳುವುದು ಹೇಗೆ?

ಈ ಕುರಿತು ವೈದ್ಯರು ಹೇಳುವಂತೆ ಸೊಳ್ಳೆಗಳನ್ನು ತಪ್ಪಿಸುವುದೇ ಝಿಕಾ ವೈರಸ್‌ನಿಂದ ದೂರವಿರಲು ಉತ್ತಮ ಮಾರ್ಗವಾಗಿದೆ. ಸೊಳ್ಳೆಗಳು ನಿಮಗೆ ಝಿಕಾ ವೈರಸ್ ಸೋಂಕನ್ನು ಮಾತ್ರ ನೀಡುವುದಿಲ್ಲ, ಆದರೆ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಅಪಾಯವನ್ನು ಹೆಚ್ಚಿಸಬಹುದು. ಒಬ್ಬ ವ್ಯಕ್ತಿಯು ಝಿಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ, ಅವನಿಂದ ದೂರವಿರಿ. ಇದಲ್ಲದೆ, ನಿಮಗೆ ಜ್ವರ, ತಲೆನೋವು, ಸ್ನಾಯು ನೋವು ಅಥವಾ ಕಣ್ಣಿನ ಸಮಸ್ಯೆಗಳಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ರಕ್ತ ಪರೀಕ್ಷೆಯನ್ನು ಮಾಡಿ. ಪರೀಕ್ಷೆಯ ವರದಿಯ ಆಧಾರದ ಮೇಲೆ, ವೈದ್ಯರು ನಿಮ್ಮ ಚಿಕಿತ್ಸೆಯನ್ನು ಪ್ರಾರಂಭಿಸಬಹುದು.



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×