ಕೇರಳ: ವಯನಾಡಿನಲ್ಲಿ (Wayanad) ಜುಲೈ 30 ರಂದು ಸಂಭವಿಸಿದ ಭೂಕುಸಿತದಿಂದ (Landslide), ಮನೆಗಳು ಕುಸಿದು ನೂರಾರು ಜನರನ್ನು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೂಡ ನೂರಾರು ಜನರು ನಾಪತ್ತೆಯಾಗಿದ್ದು (Missing), ರಕ್ಷಣಾ ಕಾರ್ಯಾಚರಣೆಗಳು (Rescue Operations) ಭರದಿಂದ ಸಾಗಿವೆ.
ಕೆಲವರು ದುರಂತದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕಳದೆ ಹಲವು ದಿನಗಳಿಂದ ಮನೆಗಳಿಗೆ ತೆರಳದೆ ಸುರಕ್ಷಿತ ಸ್ಥಳಗಳಲ್ಲಿದ್ದ ಹಲವು ಜನ ತಮ್ಮ ಮನೆಗಳತ್ತ ಮುಖ ಮಾಡಿದ್ದು, ಈ ವೇಳೆ ಅವರಿಗೆ ದೊಡ್ಡ ಶಾಕ್ ಎದುರಾಗಿದೆ. ಭಾಗಶಃ ನಾಶವಾದ ಮನೆಗಳಿಗೆ ನುಗ್ದಿದ ಕಳ್ಳರು ಸಿಕ್ಕ ಸಿಕ್ಕ ವಸ್ತುಗಳನ್ನು ಲೂಟಿ (Loote) ಮಾಡಿದ್ದಾರೆ ಎಂದು ಸಂತ್ರಸ್ತರು (Victims) ಹೇಳಿಕೊಂಡಿದ್ದಾರೆ.
ದುರಂತದ ಲಾಭ ಪಡೆದ ಕಳ್ಳರು
ಭೂಕುಸಿತದ ಹಿನ್ನೆಲೆ ಎಲ್ಲರನ್ನು ಮನೆಗಳಿಂದ ಕರೆಸಿಕೊಂಡು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಹೀಗೆ ಬಿಟ್ಟು ಹೋದ ಮನೆಗಳಲ್ಲಿ ಕಳ್ಳತನಗಳು ನಡೆಯುತ್ತಿದ್ದು, ಪೊಲೀಸರು ರಾತ್ರಿ ಗಸ್ತು ಹೆಚ್ಚಿಸುವಂತೆ ಸಂತ್ರಸ್ತರು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಅತಿ ದೊಡ್ಡ ದುರಂತದ ಲಾಭ ಪಡೆದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದಾರೆ ಎಂದು ಸ್ಥಳಾಂತರಗೊಂಡ ನಿವಾಸಿಗಳು ಶಂಕಿಸಿದ್ದಾರೆ. ರಾತ್ರಿ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಈ ಪ್ರದೇಶಕ್ಕೆ ನುಗ್ಗುವವರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಸಂತ್ರಸ್ತ ಕೆಲವವು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮನೆ ಬಾಗಿಲು ಮುರಿದು ಕಳ್ಳತನ
ಭೂಕುಸಿತದಿಂದ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ, ದುರಂತದ ಸಮಯದಲ್ಲಿ ನಮ್ಮ ಸುರಕ್ಷತೆಯ ಉದ್ದೇಶದಿಂದ ಮನೆಗಳನ್ನು ಬಿಟ್ಟು ಹೋಗಿದ್ದೆವು. ನಮ್ಮ ಮನೆಯ ಸ್ಥಿತಿಯನ್ನು ಪರಿಶೀಲಿಸಲು ನಾವು ಹಿಂತಿರುಗಿದಾಗ, ಬಾಗಿಲು ಮುರಿದು ತೆರೆದಿರುವುದನ್ನು ನೋಡಿದ್ದೇವೆ. ಸದ್ಯ ಅವರು ತಂಗಿರುವ ರೆಸಾರ್ಟ್‌ನಲ್ಲಿರುವ ಅವರ ಕೊಠಡಿಯನ್ನು ಕೂಡ ಕಳ್ಳರು ಗುರಿಯಾಗಿಸಿಕೊಂಡು ಅವರ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ ಎಂದು ದೂರಿದರು. ಶನಿವಾರ ಸಂಜೆ ಹೇಳಿಕೆ ನೀಡಿರುವ ಅಧಿಕಾರಿಗಳು, ಚೂರಲ್ಮಲಾ, ಮುಂಡಕ್ಕೈ ಸೇರಿದಂತೆ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ರಾತ್ರಿ ವೇಳೆ ಅನುಮತಿ ಇಲ್ಲದೆ ಓಡಾಡುವಂತಿಲ್ಲ
ಭೂಕುಸಿತ ಪೀಡಿತ ಪ್ರದೇಶಗಳಿಗೆ ಅಥವಾ ಸಂತ್ರಸ್ತರ ಮನೆಗಳಿಗೆ ರಾತ್ರಿಯಲ್ಲಿ ಅನುಮತಿಯಿಲ್ಲದೆ ಪ್ರವೇಶಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಹೆಸರಿನಲ್ಲಿ ಅಥವಾ ರಾತ್ರಿಯಲ್ಲಿ ಪೊಲೀಸರ ಅನುಮತಿಯಿಲ್ಲದೆ ಪೀಡಿತ ಪ್ರದೇಶಗಳಿಗೆ ಅಥವಾ ಮನೆಗಳಿಗೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ
ವಯನಾಡು ಜಿಲ್ಲೆಯ ರಕ್ಷಣಾ ತಂಡಗಳು ಶನಿವಾರ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದವು. ದುರಂತದ ಭೂಕುಸಿತದಿಂದ ಸತ್ತವರ ಸಂಖ್ಯೆ 219ಕ್ಕೆ ಏರಿದೆ. ಸುಮಾರು 300 ಜನರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಬದುಕುಳಿದವರು ಅಥವಾ ಮೃತದೇಹಗಳನ್ನು ಪತ್ತೆಹಚ್ಚಲು ಸುಧಾರಿತ ರಾಡಾರ್‌ಗಳು, ಡ್ರೋನ್‌ಗಳು ಮತ್ತು ಭಾರೀ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ. ಐದನೇ ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್, ಕೆ-9 ಡಾಗ್ ಸ್ಕ್ವಾಡ್, ಸೇನೆ, ವಿಶೇಷ ಕಾರ್ಯಾಚರಣೆ ತಂಡ, ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್, ಪೊಲೀಸ್, ಅಗ್ನಿಶಾಮಕ ದಳ, ಅರಣ್ಯ ಸೇರಿದಂತೆ ವಿವಿಧ ಪಡೆಗಳ ಸುಮಾರು 1,300 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
.jpeg)