ಅತ್ಯಂತ ಭೀಕರ ಭೂಕುಸಿತಕ್ಕೆ ಒಳಗಾಗಿರುವ ವಯನಾಡಿನ ಪ್ರದೇಶಗಳಿಗೆ ಜಮಾಅತೆ ಇಸ್ಲಾಮೀ ಕೇರಳದ ಸನ್ನದ್ಧ ಸಂಘಟನೆ IRW ನೊಂದಿಗೆ ಸಹಕರಿಸಿಕೊಂಡು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಕರ್ನಾಟಕದ HRS ತಂಡವು ಝೋನಲ್ ಲೀಡರ್ ಅಮೀರ್ ಕುದ್ರೋಳಿಯವರ ನೇತೃತ್ವದಲ್ಲಿ ಇಂದು (ಆಗಸ್ಟ್ 1ರಂದು) ಬೆಳಿಗ್ಗೆ ಕೊಡಗು ಮಾರ್ಗವಾಗಿ ವಯನಾಡಿಗೆ ಹೊರಟಿತು. ಭಟ್ಕಳ ಉಡುಪಿ ಮತ್ತು ಮಂಗಳೂರಿನಿಂದ ಹೊರಟ ತಂಡ ನಿನ್ನೆರಾತ್ರಿ ಮಡಿಕೇರಿಯಲ್ಲಿ ತಂಗಿದ್ದು, ಬೆಳಿಗ್ಗೆ ಕೊಡಗು ಮತ್ತು ಮೈಸೂರು ಜಿಲ್ಲಾ ಎಚ್. ಆರ್.ಎಸ್ ತಂಡದೊಂದಿಗೆ ಕುಟ್ಟ ಮಾರ್ಗವಾಗಿ ವಯನಾಡ್ ತಲುಪಲಿದೆ. ಮಂಗಳೂರಿನಿಂದ ಮಡಿಕೇರಿಗೆ ಆಗಮಿಸಿದ ತಂಡವನ್ನು ಮೈಸೂರು ವಲಯ ಸಂಚಾಲಕರ ನೇತೃತ್ವದಲ್ಲಿ ಫಜ್ರ್ ನಮಾಝ್ ಬಳಿಕ ಉದ್ಬೋಧೆ ನಡೆಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಮಡಿಕೇರಿ ಸ್ಥಾನೀಯ ಅಧ್ಯಕ್ಷರಾದ ಅಫ್ಸರ್ ಸಿ. ಎಚ್. ಕೊಡಗು ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು. ಮಡಿಕೇರಿಯ HRS ಸದಸ್ಯ ಅಬ್ದುಲ್ಲಾ ಮಡಿಕೇರಿ ಮಂಗಳೂರು ತಂಡದೊಂದಿಗೆ ಸೇರಿಕೊಂಡರು. ಅಲ್ಲಾಹನು HRS ತಂಡವನ್ನು ಅನುಗ್ರಹಿಸಲಿ.
