ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿಯ ಆಂತರಿಕ ಚುನಾವಣೆ ದಿನಾಂಕ 16/08/2024 ರಂದು ನುಸ್ರತುಲ್ ಮಸಾಕೀನ್ ಅಲೆಕಲ ಕಛೇರಿಯಲ್ಲಿ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ನಗರ ಸಮಿತಿ ಕಾರ್ಯದರ್ಶಿಯಾದ ಜಮಾಲ್ ಉಳ್ಳಾಲ ಕಳೆದ ಸಾಲಿನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ನಂತರ ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ ಉಬೈದ್ ಅಮ್ಮೆಂಬಳ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
2024-27 ರ ಅವಧಿಗೆ ಉಳ್ಳಾಲ ನಗರ ಸಮಿತಿಗೆ ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಕಾರ್ಯದರ್ಶಿಯಾಗಿ ಜಮಾಲ್,ಉಪಾಧ್ಯಕ್ಷರಾಗಿ ರಹ್ಮಮತುಲ್ಲಾ ಜೊತೆ ಕಾರ್ಯದರ್ಶಿಯಾಗಿ ಸಬೀಲ್ ಕೋಶಧಿಕಾರಿ ಬದ್ರುದ್ದೀನ್ ಮುಕ್ಕಚೇರಿ ಹಾಗೂ ಸಮಿತಿ ಸದಸ್ಯರಾಗಿ ಇಮ್ತಿಯಾಝ್ ಮುಕ್ಕಚೇರಿ, ಹುಸೈನ್ ಅಲೆಕಲ ಹನೀಫ್ ಮಾರ್ಗತಲೆ ಮತ್ತು ಇಮ್ತಿಯಾಝ್ ಕೋಟೆಪುರ ಆಯ್ಕೆಯಾದರು.
ನೂತನ ಅಧ್ಯಕ್ಷರಾದ ಅಬೂಬಕ್ಕರ್ ಸಭೆ ಉದ್ದೇಶಿಸಿ ಮಾತನಾಡಿದರು. ಸಮಾರೋಪ ಬಾಷಣವನ್ನು ರಾಜ್ಯ ಸಮಿತಿ ಸದಸ್ಯರಾದ ನವಾಝ್ ಉಳ್ಳಾಲ ಹಾಗೂ ಮಂಗಳೂರು ವಿಧಾನ ಸಭಾ ಅಧ್ಯಕ್ಷರಾದ ಬಷೀರ್ ಎಸ್. ಎಂ ನೂತನ ಸಮಿತಿಗೆ ಅಭಿನಂದನಾ ಭಾಷನ ಮಾಡಿದರೂ ಹಾಗೂ ಶಮೀರ್ ಟಿಪ್ಪುನಗರ ನಾಯಕತ್ವದ ತರಬೇತಿಯನ್ನು ನೀಡಿ, ನೂತನ ಜೊತೆ ಕಾರ್ಯದರ್ಶಿಯಾದ ಸಬೀಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭಾ ಕೌನ್ಸಿಲರ್ ಗಳಾದ
ಕಮರುನ್ನೀಸ ನಿಝಾಮ್, ಅಝ್ಗರ್ ಅಲಿ,
ರಮೀಝ್,ಝರೀನರವೂಫ್,
ಸೈನಾಝ್ ಅಕ್ರಮ್ ಹಸನ್,
ರುಕಿಯ ಇಕ್ಬಾಲ್ ಹಾಗೂ 2024-27 ಸಾಲಿನ ಬೂತ್ ಪದಾಧಿಕಾರಿಗಳು ಮತ್ತು ವಾರ್ಡ್ ಕೌನ್ಸಿಲರ್ ಗಳು ಹಾಜರಿದ್ದರು ಬದ್ರುದ್ದಿನ್ ವಂದಿಸಿದರು.
