ಬೆಂಗಳೂರು, ಆಗಸ್ಟ್ 15: ದಕ್ಷಿಣ ಬೆಂಗಳೂರಿನ ಜೆಪಿ ನಗರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಮಂಗಳವಾರ ಆಗಸ್ಟ್ 14 ರಂದು ನಡೆದಿದೆ.
ಖಿಚ್ಡಿ ತಯಾರಿಸುತ್ತಿದ್ದಾಗ ಕುಕ್ಕರ್‌ನಿಂದ ಸ್ಫೋಟ ಸಂಭವಿಸಿದೆ. ಇದು ಸಣ್ಣ ಗ್ಯಾಸ್ ಸ್ಟೌವ್‌ನಿಂದ ಸ್ಪೋಟಕ್ಕೆ ಕಾರಣವಾಗಿದೆ. ಜ್ವಾಲೆಯು ತ್ವರಿತವಾಗಿ ಹರಡಿ ಮನೆಯ ವಸ್ತುಗಳನ್ನು ನಾಶಪಡಿಸಿದೆ. ನಿವಾಸದಲ್ಲಿ ವಾಸಿಸುತ್ತಿದ್ದ ಇಬ್ಬರು ಕ್ಷೌರಿಕರಿಗೆ ತೀವ್ರ ಸುಟ್ಟಗಾಯವಾಗಿದೆ.
ಮೃತ ಸಮೀರ್ ಮತ್ತು ಗಾಯಾಳು ಮೊಹ್ಸಿನ್ ಉತ್ತರ ಪ್ರದೇಶ ಮೂಲದವರಾಗಿದ್ದು, ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಸಮೀರ್ ಸ್ಫೋಟದಿಂದ ಬದುಕುಳಿಯಲಿಲ್ಲ, ಮೊಹ್ಸಿನ್ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಪೋಟ ನಡೆದ ಕೂಡಲೇ ಸ್ಥಳೀಯ ಪೊಲಿಉಸ್ ಮತ್ತು NIA ತನಿಖೆ ನಡೆಸಿತು.ಆದಾಗ್ಯೂ, ಸ್ಫೋಟವು ಪ್ರೆಶರ್ ಕುಕ್ಕರ್‌ನಿಂದ ಸಂಭವಿಸಿದ ಅಪಘಾತವಾಗಿದೆ, ಭಯೋತ್ಪಾದನಾ ಕೃತ್ಯವಲ್ಲ ಎಂದು ದೃಢಪಡಿಸಲಾಗಿದೆ.
ಘಟನೆ ಕುರಿತು ಪುಟ್ಟೇನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
