ಮಡಿಕೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವ: ರುದ್ರಶ್ರಮದ ಹಿರಿಯರೊಂದಿಗೆ ಸಂಭ್ರಮಾಚರಣೆ


ನೊಂದವರ ಬಾಳಿನ ಆಶಾಕಿರಣ ಹಾಗೂ ಸಂತೆ ಮಾರುಕಟ್ಟೆ ರಕ್ಷಣಾ ಸಮಿತಿ ಮಡಿಕೇರಿ ಸಂಯುಕ್ತ ಸಮಯದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಮಡಿಕೇರಿಯ ಮಾರುಕಟ್ಟೆಯ ಆವರಣದಲ್ಲಿ ರುದ್ರಶ್ರಮದ ಹಿರಿಯರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಸರಿಯಾಗಿ ಸುಬೇದಾರ್ ಕ್ಯಾಪ್ಟನ್ ಡೇವಿಡ್ ಹೆನ್ರಿವೇಗಸ್ ಧ್ವಜಾರೋಹಣವನ್ನು ನೆರವೇರಿಸಿದರು ಅದಾದ ಬಳಿಕ ನೆರೆದ ರುದ್ರಶ್ರಮದ ಹಿರಿಯರ ಸಮ್ಮುಖದಲ್ಲಿ ಭಾಷಾ ಫೈವ್ ಸ್ಟಾರ್ ಸಿಂಗರ್ ತಂಡದ ನಾಯಕತ್ವದಲ್ಲಿ ನಡೆಯುವ ರಸಮಂಜರಿ ಕಾರ್ಯಕ್ರಮದ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ವೇದಿಕೆಯಲ್ಲಿ ನೋಂದವರ ಬಾಳಿನ ಆಶಾಕಿರಣದ ಅಧ್ಯಕ್ಷ ಮಹಮ್ಮದಲಿ. ಮಾರುಕಟ್ಟೆ ಸಂತೆ ವ್ಯಾಪಾರ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಎಂಎಂ ಇಸ್ಮಾಯಿಲ್. ಪ್ರಧಾನ ಕಾರ್ಯದರ್ಶಿ ಎಮ್ಎ ಅಬ್ದುಲ್ ರಜಾಕ್ ವಿಕಾಸ್ ಆಶ್ರಮದ ಮುಖ್ಯಸ್ಥರಾದ ಸಂತೋಷ್ ರುದ್ರ ಆಶ್ರಮದ ಹಿರಿಯರು ಉಪಸ್ಥಿತರಿದ್ದರು ಸಭಾ ಕಾರ್ಯಕ್ರಮದ ನಂತರ ಫೈವ್ ಸ್ಟಾರ್ ಸ್ಥಳೀಯ ಪ್ರತಿಭೆಗಳಿಂದ ಹಿರಿಯರನ್ನು ಮನರಂಜಿಸಲು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಯಿತು

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×