ಪಾಕಿಸ್ತಾನದ ಹೈಕಮಿಷನ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ 7 ಭಾರತೀಯ ಸಂಸದರಿಗೆ ಮಾವಿನಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ.
ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ, ಶಶಿ ತರೂರ್, ಸಮಾಜವಾದಿ ಪಕ್ಷದ ಸಂಸದರಾದ ಮೊಹಿಬ್ಬುಲ್ಲಾ ನದ್ವಿ, ಜಿಯಾ ಉರ್ ರೆಹಮಾನ್ ಬಾರ್ಕ್, ಅಫ್ಜಲ್ ಅನ್ಸಾರಿ, ಇಕ್ರಾ ಚೌಧರಿ ಮತ್ತು ಕಪಿಲ್ ಸಿಬಲ್ ಸೇರಿದಂತೆ ಸಂಸತ್ತಿನ ಬಹು ಭಾರತೀಯ ಸದಸ್ಯರಿಗೆ ಪಾಕಿಸ್ತಾನದ ಹೈಕಮಿಷನ್ ಬುಟ್ಟಿಗಳಲ್ಲಿ ಮಾವಿನ ಹಣ್ಣುಗಳನ್ನು ಕಳುಹಿಸಿದೆ ಎಂಬ ವರದಿಗಳು ತಿಳಿಸಿವೆ.
1981 ರಲ್ಲಿ, ಪಾಕಿಸ್ತಾನದ ಅಧ್ಯಕ್ಷ ಜಿಯಾ ಉಲ್ ಹಕ್ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ “ಅನ್ವರ್ ರತೌಲ್” ಮಾವಿನ ಹಣ್ಣನ್ನು ಬುಟ್ಟಿಯಲ್ಲಿ ಕಳುಹಿಸಿದ್ದರು.
2015ರ ಈದ್ ಹಬ್ಬದ ಸಮಯದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಇತರ ನಾಯಕರಿಗೆ 10 ಕೆಜಿ ಮಾವಿನ ಹಣ್ಣುಗಳನ್ನು ಕಳುಹಿಸಿದ್ದರು, ಹೀಗೆ ಈ ಸಂಪ್ರದಾಯ ಮುಂದುವರಿದಿದೆ ಎನ್ನಲಾಗಿದೆ.
#WATCH | Union Minister Giriraj Singh says, "Some time ago Rahul Gandhi said that he doesn't like mangoes from Uttar Pradesh. Pakistan Embassy has sent mangoes to Rahul Gandhi now. He should tell what other things he likes. Rahul Gandhi batayen kya Modi ko hatane ka koi naya… pic.twitter.com/HB9HUHiNGz
— ANI (@ANI) August 7, 2024
.jpeg)