SHANMEDIANEWS:- ಟ್ರಾಫಿಕ್ ಪೋಲಿಸರೆಂದರೆ ನಾವು ರಸ್ತೆಯಲ್ಲಿ ವಾಹನ ಚಲಾಯಿಸುವ ವೇಳೆ ಎಲ್ಲೋ ಮರೆಯಲ್ಲಿ ನಿಂತು ಫೈನ್ ನೆಪದಲ್ಲಿ ವಸೂಲಿ ಮಾಡೋದು, ನೋ ಪಾರ್ಕಿಂಗ್ ಏರಿಯಾದಲ್ಲಿ ಹಾಕಿರೋ ಗಾಡಿಗೆ ಫೈನ್ ಹಾಕೋರು ಅಂತ ಅಷ್ಟೇ ಅಂದುಕೊಂಡಿರ್ತೇವೆ.. ಆದರೆ ಅವರಲ್ಲೂ ಕೆಲವರು ನಿಯತ್ತಲ್ಲಿ ಇರ್ತಾರೆ ಅನ್ನೋದು ನಮಗೂ ಒಮ್ಮೊಮ್ಮೆ ಅನಿಸುತ್ತದೆ. ಯಾಕೆಂದರೆ ಅಲ್ಲೊಬ್ಬ ಇಲ್ಲೊಬ್ಬ ಈಶ್ವರ ಸ್ವಾಮಿ ಅವರಂಥ ಪೋಲಿಸ್ ಅಧಿಕಾರಿಗಳು ಇನ್ನೂ ಪೋಲಿಸ್ ಸೇವೆಯ ಜೊತೆ ಸಾಮಾಜಿಕ ಕಳಕಳಿಯನ್ನೂ ತೋರುತ್ತಾರೆ.
ಯಾರಿದು ಈಶ್ವರ ಸ್ವಾಮಿ?
ಮಂಗಳೂರು ನಗರ ಪೂರ್ವ ಪೋಲಿಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಮೂಲತಃ ಮೈಸೂರಿನವರು. 32 ವರ್ಷಗಳಿಂದ ಮಂಗಳೂರಿನಲ್ಲೇ ಸರ್ಕಾರಿ ಸೇವೆಯಲ್ಲಿದ್ದು, ನಿವೃತ್ತಿಯ ಅಂಚಿನಲ್ಲಿದ್ದಾರೆ. ಕದ್ರಿ, ಬಂದರು, ಪಣಂಬೂರು ಸೇರಿದಂತೆ ಮಂಗಳೂರು ನಗರ ಪಶ್ಚಿಮ ಪೋಲಿಸ್ ಠಾಣೆಯಲ್ಲೂ ಕರ್ತವ್ಯ ನಿರ್ವಹಿಸಿದವರು. ಇಂದು ಅವರು ಮಾಡಿರುವ ಕರ್ತವ್ಯಕ್ಕೂ ಮಿಗಿಲಾದ ಕಾರ್ಯ ಅವರನ್ನು ಗುರುತಿಸುವಂತೆ ಮಾಡಿದೆ.
ಹೆದ್ದಾರಿಯ ಗುಂಡಿ ಮುಚ್ಚಿದ ನಿಸ್ವಾರ್ಥಿ..!!
ಮಂಗಳೂರಿನ ಕೆಪಿಟಿ ಬಳಿಯ ರಸ್ತೆಯಲ್ಲಿ ಹಲವು ದಿನಗಳಿಂದ ಡಾಂಬಾರು ಕಿತ್ತು ಬಂದಿದ್ದರಿಂದ ವಾಹನ ಸವಾರರು, ಪಾದಚಾರಿಗಳು ಸಮಸ್ಯೆ ಅನುಭವಿಸುತ್ತಿದ್ದರು. ವೇಗವಾಗಿ ಬಂದ ಬೈಕ್ ಸವಾರರಂತೂ ಗುಂಡಿಗಳನ್ನು ಕಂಡೊಡನೇ ಬ್ರೇಕ್ ಹಾಕುವ ಧಾವಂತದಲ್ಲಿ ಬ್ಯಾಲೆನ್ಸ್ ಗಾಗಿ ಪರದಾಡುವುದು ನಿತ್ಯ ನಿರಂತರವಾಗಿತ್ತು. ಇದನ್ನೆಲ್ಲ ನೋಡುತ್ತಿದ್ದ ಈಶ್ವರ ಸ್ವಾಮಿಯವರಿಗೆ ಏನನಿಸಿತೋ ಏನೋ… ಕೆಲವೊಬ್ಬರ ನೆರವಿನ ಜೊತೆಗೆ ತಾನೂ ದುಡ್ಡು ಒಟ್ಟುಗೂಡಿಸಿ ಗುಂಡಿ ಮುಚ್ಚಲು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದಲ್ಲದೇ ತಾವೇ ಸಲಾಕೆ ಹಿಡಿದು ಗುಂಡಿ ಮುಚ್ಚಲು ನಿಂತೇ ಬಿಟ್ಟರು
.jpg)

