ಪರೀಕ್ಷೆಯಲ್ಲಿ ಅನುತ್ತೀರ್ಣ: ಮನನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು



ಮಣಿಪಾಲ: 10 ನೇ ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮೃತ ಬಾಲಕನನ್ನು ಕಾಪು ಎಲ್ಲೂರು ಗ್ರಾಮದ ಶೇಖರ್‌ ಎಂಬವರ ಪುತ್ರ ಅಜಿತ್‌ (17) ಎಂದು ಗುರುತಿಸಲಾಗಿದೆ. 

ಈತ ಸರ್ಕಾರಿ ಪ್ರೌಡಶಾಲೆ ಮುದರಂಗಡಿಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು 2 ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದ. ಹೀಗಾಗಿ ಏಪ್ರಿಲ್‌ ನಲ್ಲಿ ಪುನಃ ಪರೀಕ್ಷೆ ಬರೆದಿದ್ದು. ಈ ವೇಳೆಯೂ ಅನುತ್ತೀರ್ಣಗೊಂಡಿದ್ದ ಎಂದು ತಿಳಿದು ಬಂದಿದೆ.

ಅಜಿತನು ಶಾಲೆ ಇಲ್ಲದ ಕಾರಣ ಕಳೆದ 4 ತಿಂಗಳಿಂದ ಮಣಿಪಾಲದಲ್ಲಿರುವ ಆತನ ಅಜ್ಜಿ ಮನೆಗೆ ಬಂದು ವಾಸಮಾಡಿಕೊಂಡಿದ್ದು ಜು.3 ರಂದು ಬೆಳಗ್ಗೆ ಬಾತ್ ರೂಂಗೆ ಹೋಗಿದ್ದ. ಎಷ್ಟು ಹೊತ್ತಾದರೂ ಹೊರಬಾರದೇ ಇದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳೆಕಿಗೆ ಬಂದಿದೆ.

ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೀನ ಹಳೆಯದು
WhatsApp Join our 'Shan Media News' WhatsApp group - Join Now ×