ಮಂಗಳೂರಿನಿಂದ ಕಾಸರಗೋಡಿಗೆ ಹೋಗುವ ಬಸ್‌ಗಳು ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ಬಾರದೆ ನೇರವಾಗಿ ಸರ್ವಿಸ್ ರಸ್ತೆಯ ಮುಖಾಂತರ ಪ್ರಯಾಣಿಕರಿಗೆ ನಿಲುಗಡೆಯನ್ನು ನೀಡುತ್ತಿದ್ದು, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗುತ್ತಿದೆ. ಆದ್ದರಿಂದ ಎಲ್ಲಾ ಬಸ್‌ಗಳು ಬಸ್ ನಿಲ್ದಾಣದಲ್ಲೇ ನಿಲ್ಲುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಖಜಾಂಚಿ ಅಬ್ದುಸ್ಸಲಾಂ ಸಿ.ಎಚ್, ಜಿಲ್ಲಾ ಉಪಾಧ್ಯಕ್ಷ ಎಂ. ದಿವಾಕರ್ ರಾವ್, ಹಾಗೂ ಹುಸೈನ್ ತೊಕ್ಕೋಟು,ಅಶ್ರಫ್ ಅಝೀಝ್,ಸೈಫ್ ಕೋಟೆಕಾರ್ ವೆಲ್ಫೇರ್ ಪಾರ್ಟಿ ಉಳ್ಳಾಲ ನಗರ ಸಮಿತಿ ಸದಸ್ಯರುಗಳ ತಂಡ ಉಳ್ಳಾಲ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಜ್ಮಾ ಫಾರೂಕಿ ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿ ಕೃಷ್ಣಾನಂದ ನಾಯ್ಡುರವರಲ್ಲಿ ಮನವಿಯನ್ನು ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಸ್ಸು ನಿಲ್ದಾಣಕ್ಕೆ ಬಾರದ ಮಂಗಳೂರು - ಕಾಸರಗೋಡು ಬಸ್‌ಗಳು : ವೆಲ್ಫೇರ್ ಪಾರ್ಟಿಯಿಂದ ಎಸಿಪಿಗೆ ಮನವಿ
bySHAN MEDIA NEWS
•
