ಉಡುಪಿ: ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಸೋಮವಾರ ಮುಂಜಾನೆವರೆಗೆ ಮುಂದುವರಿದಿದೆ.
ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಮತ್ತೆ ನಿರಂತರ ಮಳೆ ಮುಂದುವರಿದರೆ ನದಿ ತೀರ ಪ್ರದೇಶದಲ್ಲಿ ನೆರೆ ಭೀತಿ ಉಂಟಾಗಬಹುದು.
ಗಾಳಿಯೊಂದಿಗೆ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಕೆಲವೆಡೆ ಹಾನಿಯ ವರದಿಯಾಗಿದೆ.
