ಬೈಕಾಡಿ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆ

 

ಸಂದರ್ಬಾ ಚಿತ್ರೆ

ಬ್ರಹ್ಮಾವರ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೈಕಾಡಿ ಗ್ರಾಮದ ಮಹಿಳೆಯೋರ್ವರ ಮೃತದೇಹವು ಜು.28ರಂದು ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಮೃತ ಮಹಿಳೆ ಬನ್ನಾಳದ ನಿವಾಸಿ ಸುರೇಂದ್ರ ಎಂಬವರ ಪತ್ನಿ ರೂಪಾ (57) ಎಂದು ತಿಳಿದು ಬಂದಿದೆ.

ಇವರು ಸುಮಾರು 7 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಜು.15ರಂದು ಸಂಜೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ. 

ಭಾನುವಾರ ಕೆರೆಯಲ್ಲಿ ಇವರ ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. 

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×