ಉಳ್ಳಾಲ ನಗರ ಸಭಾ ಜೆಡಿಎಸ್ ಸದಸ್ಯ ದಿನಕರ್ ಉಳ್ಳಾಲ್ ಪಕ್ಷಕ್ಕೆ ರಾಜೀನಾಮೆ.



ಉಳ್ಳಾಲದ ರಾಜಕೀಯ ಬೆಳೆವಣಿಗೆಯೊ0ದಲ್ಲಿ ನಗರ ಸಭೆಯ ಪ್ರತಿಭಾವಂತ, ಸಮರ್ಥ ಸದಸ್ಯ ಎಂದೇ ಜನ ಜನಿತವಾಗಿರುವ ದಿನಕರ್ ಉಳ್ಳಾಲ್ ತಮ್ಮ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು,ಇದರಿಂದ ಉಳ್ಳಾಲದಲ್ಲಿ ಈಗಾಗಲೇ ಸಂಪೂರ್ಣವಾಗಿ ಸೊರಗಿ ಹೋಗಿರುವ ಪಕ್ಷಕ್ಕೆ ದೊಡ್ಡ ಆಘಾತ ವಾಗಿದೆ.


  ಒಟ್ಟು 31 ಸದಸ್ಯರ ಉಳ್ಳಾಲ ನಗರ ಸಭೆಯಲ್ಲಿ ಜೆಡಿಎಸ್ 4 ಸದಸ್ಯರನ್ನು ಹೊಂದಿದ್ದು ಇದೀಗ ದಿನಕರ್ ಉಳ್ಳಾಲ್ ರಾಜೀನಾಮೆ ನಂತರ ಬಾಕಿ ಮೂರು ಸದಸ್ಯರುಗಳಾದ ಜಬ್ಬಾರ್, ಖಲೀಲ್, ಹಾಗೂ ಬಷೀರ್ ಇವರು ಗಳ ಮುಂದಿನ ರಾಜಕೀಯ ನಡೆ ಏನೆಂದು ಶೀಘ್ರ ಗೊತ್ತಾಗಲಿದೆ.


  ಕಾನೂನು, ಕಾಯಿದೆಗಳ ಚೌಕಟ್ಟಿನಲ್ಲಿದ್ದು ಕೊಂಡು ನೇರ-ದಿಟ್ಟ ನಡೆ ನುಡಿ ಯನ್ನು ಮೈಗೂಡಿಸಿಕೊಂಡಿರುವ ದಿನಕರ್ ಯಾರೊಂದಿಗೆಯೂ ಯಾವುದೇ ಮುಲಾಜು, adjustment ಇಲ್ಲದೇ ನಗರ ಸಭೆಯ ಲೋಪ ದೋಷ ಗಳನ್ನು ಅಂಕಿ ಅಂಶ ಗಳೊಂದಿಗೆ ಎತ್ತಿ ತೋರಿಸುವ ಇಂತಹ ಓರ್ವ ಸಮರ್ಥ, ಪ್ರತಿಭಾವಂತ ಸದಸ್ಯ ನಗರ ಸಭೆಗೆ ಬೇಕೇ ಬೇಕೆಂದು ಜಾತಿ, ಧರ್ಮ,ಪಕ್ಷ ಭೇದ ಮರೆತು ಜನ ದಿನಕರ್ ಸ್ವತಂತ್ರ ಅಥವಾ ಯಾವುದೇ ರಾಜಕೀಯ ಪಕ್ಷ ದಿಂದ ಸ್ಪರ್ಧೆ ಮಾಡಿದರೂ ಇವರನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ .


  ಮುಂದೆ ಕಾಂಗ್ರೆಸ್ ಸೇರಿ ಕೊಳ್ಳುವ ಪ್ಲಾನ್ ಇದೆಯೋ? ಎಂಬ ಪ್ರಶ್ನೆಗೆ ಯಾವುದೇ ಪಕ್ಷ ಸೇರಿ ಕೊಳ್ಳದೇ ಸ್ವತಂತ್ರವಾಗಿ ರಾಜಕೀಯದಲ್ಲಿ ಮುಂದುವರಿಯುವೆ. ಕೋಟ ಶ್ರೀನಿವಾಸ ಪೂಜಾರಿ ಯವರಿಂದ ತೆರವು ಆಗಿರುವ ಪರಿಷತ್ ಸ್ಥಾನಕ್ಕೆ ಶೀಘ್ರವೇ ನಡೆಯುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದು ಇದೇ ಸಂದರ್ಭದಲ್ಲಿ ಮಾಜಿ ನಗರ ಸಭಾ ಅಧ್ಯಕ್ಷರೂ ಆಗಿರುವ ದಿನಕರ್ ಉಳ್ಳಾಲ್ ಹೇಳಿದ್ದಾರೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×