ಮಂಗಳೂರು ದಕ್ಶಿಣ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಯವರು ಬಿಜೆಪಿ ಯುವ ಮೋರ್ಚಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ವಿರೋಧ ಪಕ್ಷದ ನಾಯಕ ಸನ್ಮಾನ್ಯ ರಾಹುಲ್ ಗಾಂಧಿಯವರನ್ನು ಹೀಯಾಳಿಸಿ ಅವನೊಬ್ಬ ಹುಚ್ಚ ಮತ್ತು ಅವನ ಕೆನ್ನೆಗೆ ಬಾರಿಸಬೇಕು ಎಂದು ಏಕವಚನದಲ್ಲಿ , ತನ್ನ ಮೈ ಮೇಲೆ ಭೂತ ಬಂದ ಹಾಗೆ ವರ್ತಿಸಿ ನೀಡಿದ ಹೇಳಿಕೆ ಅವಿವೇಕುತನದ್ದು ಮತ್ತು ಹುಚ್ಚಾಟಿಕೆ.
ಈ ಹೇಳಿಕೆಯನ್ನು ನಾವು ಗಂಭೀರವಾಗಿ ಖಂಡಿಸುತ್ತೇವೆ. ಸಾರ್ವಜನಿಕರು ಇಂತಹ ಅವಿವೇಕಿ, ಹುಚ್ಚ ಶಾಸಕನಿಗೆ ತಕ್ಕ ಪಾಠ ಕಲಿಸಬೇಕು ಮತ್ತು ಇವನನ್ನು ಹುಚ್ಚು ಆಸ್ಪತ್ರೆಯಲ್ಲಿ ಹುಚ್ಚರನ್ನು ಸೇರಿಸುವ ಸೆಲ್ ಒಳಗಡೆ ಹಾಕಬೇಕು ಎಂದು ಕರ್ನಾಟಕ ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸಾಂವಿಧಾನಿಕ ಅಪರಾಧ ಹಾಗು ಅಕ್ಷಮ್ಯ. ತನ್ನ ಲೋಪವನ್ನು ಅಡಗಿಸುವ ಒಂದು ತಂತ್ರ. ತನ್ನ ಕ್ಷೇತ್ರಕ್ಕೆ ಏನೂ ಮಾಡದ ಇವನು ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಒಂದು ಕುತಂತ್ರ.
ಇವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರಕಾರ ಹಾಗು ಗ್ರಹ ಇಲಾಖೆಯನ್ನು ಒತ್ತಾಯಿಸಲಿದ್ದಾರೆ.
