![]() |
| Image :- SHANMEDIANEWS |
ಉಳ್ಳಾಲ ನಗರ ಸಭಾ ಮಾಜಿ ಅಧ್ಯಕ್ಷರೂ, ಹಾಲಿ ಜೆಡಿಎಸ್ ಸದಸ್ಯ ದಿನಕರ್ ಉಳ್ಳಾಲ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇನ್ನಿಬ್ಬರು ಜೆಡಿಎಸ್ ಸದಸ್ಯರಾದ ಅಬ್ದುಲ್ ಜಬ್ಬಾರ್ ( ವಾರ್ಡ್ 10:ವಿದ್ಯಾರಣ್ಯ ನಗರ ) ಹಾಗೂ ಖಲೀಲ್ ಉಳ್ಳಾಲ್ ( ವಾರ್ಡ್ 27:ಮುಕ್ಕಚೇರಿ 2. )ಕೂಡ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಈ ವಿದ್ಯಮಾನ ದಿಂದ ಉಳ್ಳಾಲದಲ್ಲಿ ಜೆಡಿಎಸ್ ಪಕ್ಷ ನೆಲೆ ಕಳೆದು ಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದು ಇದರೊಂದಿಗೆ ನಗರ ಸಭೆಯಲ್ಲಿ ಈಗ ಜೆಡಿಎಸ್ ನಲ್ಲಿ ಒಂಟಿ ಸದಸ್ಯ ಬಷೀರ್ (ವಾರ್ಡ್ 9:ಚೋಟಾ ಮಂಗಳೂರು)ರವರು ಮಾತ್ರ ಉಳಿದು ಕೊಂಡಿದ್ದಾರೆ.
ಈ ಮೂರು ಜೆಡಿಎಸ್ ಸದಸ್ಯರುಗಳ ರಾಜೀನಾಮೆ ನಂತರ ಸಮಾಜ ಸೇವೆ, ಮತ್ತು ತಮ್ಮ ವಾರ್ಡ್ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ಕೊಡುವ ಮೂಲಕ ವಾರ್ಡಲ್ಲಿ ಜನಪ್ರಿಯವಾಗಿರುವ ಬಷೀರ್ ರವರ ಮುಂದಿನ ನಿಲುವು ಏನೆಂದು ಕಾದು ನೋಡಬೇಕು.
ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ಕೌನ್ಸಿಲರ್ ಖಲೀಲ್ ರವರು UT ಖಾದರ್ ಪರವಾಗಿ ಹಾಗೂ ಈತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕೂಡ ಅವರು ಪದ್ಮರಾಜ್ ಪರ ಕಾಂಗ್ರೆಸ್ ಬೂತಲ್ಲಿ ಕೂತು ಬಹಿರಂಗ ಪ್ರಚಾರ ಮಾಡುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದರು.
ಇನ್ನು ಜೆಡಿಎಸ್ ಸದಸ್ಯ ಜಬ್ಬಾರ್ ರವರು ಕೂಡ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ವಿರುದ್ಧವಾಗಿ ಕಾಂಗ್ರೆಸ್ ಪರ, ಮತ್ತು ಕಳೆದ ವಿಧಾನಸಭಾ ಚುನಾವಣೆ UT ಖಾದರ್ ಗೆ ಬೆಂಬಲವಾಗಿ ನಿಂತು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವಂತೆ ಕೆಲಸ ಮಾಡಿದ್ದರು.
ಇದೀಗ ಈ ಇಬ್ಬರು ಕೌನ್ಸಿಲರನ್ನು ಬರ ಮಾಡಿ ಕೊಳ್ಳಲು ಪಕ್ಷ ಆಸಕ್ತಿ ಹೊಂದಿದ್ದು, ಇವರು ಕೂಡ ಕಾಂಗ್ರೆಸ್ ಪಕ್ಷ ಸೇರಿ ಕೊಳ್ಳಲು ಉತ್ಸುಕರಾಗಿದ್ದು,ಇವರ ಸೇರ್ಪಡೆಗೆ ಪಕ್ಷದಲ್ಲಿ ವೇದಿಕೆ ಸಜ್ಜಾಗುತ್ತಿದೆ.
