ತೀರ್ಥಹಳ್ಳಿ: ನಾಪತ್ತೆಯಾಗಿದ್ದ ಯುವತಿ ಪೂಜಾ ಎ.ಕೆ. (24) ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ತಾಲೂಕಿನ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೂಜಾ ಜೂನ್ 30ರಂದು ನಾಪತ್ತೆಯಾಗಿದ್ದರು. ಕೊಲೆ ಆರೋಪಿ ಮಣಿಯನ್ನು ಬಂಧಿಸಲಾಗಿದೆ. ಆಗುಂಬೆ ಪೊಲೀಸ್ ಠಾಣೆಯ ಪಿ.ಎಸ್.ಐ. ರಂಗನಾಥ್ ಅಂತರಗಟ್ಟಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿ ಮಣಿಯು ನಾಲೂರು ಸಮೀಪ ಪೂಜಾ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಮತ್ತು ಶವವನ್ನು ಹೊಂಡದಲ್ಲಿ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಆರೋಪಿ ಮಣಿಯನ್ನು ಸ್ಥಳಕ್ಕೆ ಕರೆದು ಸ್ಥಳ ಮಹಜರು ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
