ಹೋಂವರ್ಕ್ ಮಾಡುವಾಗ ಮಂಚದಿಂದ ಕೆಳಗೆ ಬಿದ್ದ ಮಗುವಿನ ಕೈಯಲ್ಲಿದ್ದ ಪೆನ್ನಿನ ತುದಿ ಮಗುವಿನ ತಲೆಯೊಳಗೆ ಚುಚ್ಚಿದ್ದು, ಪರಿಣಾಮವಾಗಿ ಮಗು ಸಾವನ್ನಪ್ಪಿದ ದಾರುಣ ಘಟನೆ ತೆಲಂಗಾಣದ ಭದ್ರಾಚಲಂ ನಗರದಲ್ಲಿ ನಡೆದಿದೆ.
ಯುಕೆಜಿ ಓದುತ್ತಿರುವ ಈ ಪುಟ್ಟ ಕಂದಮ್ಮ ನಂತರ ಎಂದಿನಂತೆ ಹೋಂವರ್ಕ್ ಮುಗಿಸಲು ಮಂಚದ ಮೇಲೆ ಕೂತಿದೆ. ಈ ವೇಳೆ ಆಟವಾಡುತ್ತಾ ಹೋಂವರ್ಕ್ ಮಾಡುವಾಗ ಮಂಚದಿಂದ ಕೆಳಗೆ ಬಿದ್ದಿದ್ದ ವೇಳೆ ಈ ಘಟನೆ ನಡೆದಿದೆ.
ಘಟನೆ ನಡೆದ ಮಗುವನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸರ್ಜರಿ ಮಾಡಿದರೂ ಮಗು ಬದುಕಿಳಿಯಲಿಲ್ಲ ಎನ್ನಲಾಗಿದೆ. ಮಗುವಿನ ಭವಿಷ್ಯ ಬೆಳಗಬೇಕಾಗಿದ್ದ ಪೆನ್ ಮಗುವಿನ ಜೀವ ತೆಗೆದಿರುವ ವಿಚಿತ್ರ ಘಟನೆ ಇದು.
