![]() |
| ಉಳ್ಳಾಲ ಪೊಲೀಸ್ ಠಾಣೆ |
1. ಮಂಗಳೂರು ನಗರದಲ್ಲಿ ಅಂತರರಾಜ್ಯ ಕಳ್ಳರು /ಚಡ್ಡಿ ಗ್ಯಾಂಗ್ /ಮನೆ ಕಳ್ಳತನ ಮಾಡುವವರು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗ್ರತೆಯನ್ನು ವಹಿಸುವುದು.
2. ಸಾರ್ವಜನಿಕರು ರಾತ್ರಿ ಸಮಯ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳುವುದು.
3. ತಮ್ಮ ತಮ್ಮ ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಡದೆ ಸೇಫ್ ಲಾಕರ್ ನಲ್ಲಿ ಇಡುವುದು.
4. ತಮ್ಮ ಮನೆಯ ಮತ್ತು ವಾಸ್ತವ್ಯದ ಪರಿಸರದಲ್ಲಿ ಇರುವ ಸಿ.ಸಿ ಕ್ಯಾಮರಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವುದು.
5. ಯಾವುದೇ ಅಪರಿಚಿತ/ ಸಂಶಯಾಸ್ಪದ ವ್ಯಕ್ತಿಗಳು, ಮಹಿಳೆಯರು ಕಂಡು ಬಂದಲ್ಲಿ ಕೂಡಲೇ ತುರ್ತು ಕರೆ ಸೇವೆ 112, city control room 9480802321, ಉಳ್ಳಾಲ ಪೊಲೀಸ್ ಠಾಣೆ 08242-2466269, ಪೊಲೀಸ್ ನಿರೀಕ್ಷಕರು 9480802315 ಪೊಲೀಸ್ ಉಪ ನಿರೀಕ್ಷಕರು 9480805353 - 9480802342 ಈ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವುದು.
6. ನಿಮ್ಮ ವಸತಿ / ಬಡಾವಣೆ / ಪರಿಸರದಲ್ಲಿ ದಾರಿ ದೀಪ, ಸಾರ್ವಜನಿಕ ದೀಪಗಳು ಉರಿಯುತ್ತಿರುವ ಬಗ್ಗೆ ದೃಡಪಡಿಸುವುದು, ಇಲ್ಲದೆ ಇದ್ದಲ್ಲಿ ಮೆಸ್ಕಾಂ / ಮಂಗಳೂರು ಮಹಾನಗರ ಪಾಲಿಕೆ/ ಸ್ಥಳೀಯ ಪಂಚಾಯತ್ ಕಾರ್ಪೋರೇಟರ್ಗಳಿಗೆ ತಿಳಿಸುವುದು (ಅಗತ್ಯ ಸಹಕಾರ ನಿರೀಕ್ಷಿಸಿದ್ದಲ್ಲಿ ಉಳ್ಳಾಲ ಠಾಣೆಯ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ )
7. ಒಂಟಿ ಮನೆಗಳು/ ಲಾಕ್ಡ್ ಹೌಸ್/ಹಿರಿಯ ನಾಗರೀಕರು / ಮಹಿಳೆಯರು ಮಾತ್ರ ವಾಸ್ತವ್ಯ ಇರುವ ಮನೆಗಳು ಇದ್ದಲ್ಲಿ ಬೀಟ್ ಪೊಲೀಸ್ ರಿಗೆ ಮಾಹಿತಿಯನ್ನು ನೀಡುವುದು.
ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕಾಗಿ ಈ ಮೂಲಕ ಕೋರಿದೆ.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಉಳ್ಳಾಲ ಪೊಲೀಸ್ ಠಾಣೆ, ಮಂಗಳೂರು ನಗರ.
