ಮಂಜೇಶ್ವರ : ಸಿಬಿಐ ಯ ಹೆಸರಿನಲ್ಲಿ ಪುತ್ರಿ ಡ್ರಗ್ಸ್ ನೊಂದಿಗೆ ಸೆರೆಯಾಗಿರುವುದಾಗಿ ಉದ್ಯಮಿಗೆ ಕರೆ : 15 ಲಕ್ಷ ರೂ. ಬೇಡಿಕೆ ಇಟ್ಟ ಆನ್ ಲೈನ್ ವಂಚಕರು

 


ಮಂಜೇಶ್ವರ : ಸಿ ಬಿ ಐ ಯ ಹೆಸರಿನಲ್ಲಿ ಮಂಜೇಶ್ವರದ ಉದ್ಯಮಿಯೊಬ್ಬರಿಗೆ ಕರೆ ಮಾಡಿ 15 ಲಕ್ಷ ರೂ. ಎಗರಿಸುವ ತಂತ್ರವೊಂದು ಶುಕ್ರವಾರದಂದು ಬೆಳಿಗ್ಗೆ ನಡೆದಿದೆ.

 ಶುಕ್ರವಾರ ಬೆಳಿಗ್ಗೆ ವಾಟ್ಸಪ್ ಮೂಲಕ ಉದ್ಯಮಿಗೆ ಅನಾಮಧೇಯ ಸಂಖ್ಯೆಯ ಮೊಬೈಲ್ ಸಂಖ್ಯೆಯಿಂದ ಸಿಬಿಐ ಅಧಿಕಾರಿಯಿಂದು ಕರೆಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಆನ್ ಲೈನ್ ವಂಚಕ ನಿಮ್ಮ ಪುತ್ರಿಯನ್ನು ಡ್ರಗ್ಸ್ ನೊಂದಿಗೆ ಸೆರೆ ಹಿಡಿಯಲಾಗಿದೆ. ಈಗ ನಾವು ಆಕೆಯನ್ನು ದೆಹಲಿಗೆ ಕೊಂಡೊಯ್ಯುತ್ತಿದ್ದೇವೆ. ಇದನ್ನು ಈಗಲೇ ಇತ್ಯರ್ಥಗೊಳಿಸಬೇಕಾದರೆ 15 ಲಕ್ಷ ರೂ. ನಮ್ಮ ಖಾತೆಗೆ ಕಳಿಸಬೇಕೆಂಬ ಬೇಡಿಕೆ ಇಟ್ಟಿದ್ದಾನೆ.



ವಿಷಯ ಕೇಳಿ ಗಾಬರಿಗೊಂಡ ಉದ್ಯಮಿ ಏನು ಮಾಡಬೇಕೆಂದು ಅರಿಯದೆ ಕಂಗಾಲಾಗಿದ್ದಾರೆ. ಪುತ್ರಿಯನ್ನು ನಿಮಗೆ ಸಿಗಬೇಕಾದರೆ ಕೂಡಲೇ ಹಣವನ್ನು ನಮ್ಮ ಖಾತೆಗೆ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಜೇಶ್ವರ ಗುಡ್ಡಕ್ಕೇರಿ ನಿವಾಸಿ ಆಹ್ಮದ್ ಅಶ್ರಫ್ ಅವರ ಪುತ್ರಿ ಮಂಗಳೂರು ಆಗ್ನೆಸ್ ಕಾಲೇಜಿನ ಪ್ರಥಮ ಪದವಿ ಯಲ್ಲಿ ಕಲಿಯುತ್ತಿರುವ ಫಾತಿಮಾ ಶಹಿಸ್ತಾ ಎಂಬಾಕೆಯ ಹೆಸರನ್ನು ಹೇಳಿ ಕರೆ ಬಂದಿದೆ ಎನ್ನಲಾಗಿದೆ. ಈಕೆಯ ಜೊತೆಗಿರುವ ಸಹಪಾಠಿಗಳ ಹೆಸರನ್ನು ಕೂಡಾ ಉಲ್ಲೇಖಿಸಿರುವುದಾಗಿ ಉದ್ಯಮಿ ತಿಳಿಸಿದ್ದಾರೆ. ಮಾತ್ರವಲ್ಲದೆ ಪುತ್ರಿ ಮನೆಯಲ್ಲಿ ಮಾತನಾಡುವ ಮಾತೃ ಭಾಷೆಯಿಂದಲೇ ಧ್ವನಿ ಕೇಳಿಸುತಿತ್ತೆನ್ನಲಾಗಿದೆ.

ನಮ್ಮ ಜೊತೆಯಾಗಿ ಡಿವೈಎಸ್ಪಿ ಇದ್ದಾರೆ. ಕೂಡಲೇ ಗೂಗಲ್ ಪೇ ಮೂಲಕ ಹಣ ಕಳಿಸದೇ ಇದ್ದರೆ ದೆಹಲಿಗೆ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದ್ದಾರೆನ್ನಲಾಗಿದೆ. ಫೋನ್ ಕರೆಯನ್ನು ಕಡಿತಗೊಳಿಸಿದ ನಂತರ, ಸ್ವಲ್ಪ ಸಮಯ ಫೋನ್ ಹ್ಯಾಂಗ್ ಆಗಿ ಎಲ್ಲಿಗೂ ಕರೆ ಹೋಗುತ್ತಿರಲಿಲ್ಲವೆನ್ನಲಾಗಿದೆ.

ಬಳಿಕ, ಅದೇ ನಂಬ್ರದಿಂದ ಒಂದು ವಾಯ್ಸ್ ಸಂದೇಶ ಬಂದಿದ್ದು ಉದ್ಯಮಿಯ ಪುತ್ರಿಯ ಧ್ವನಿಯಲ್ಲಿ ಮಾತೃಭಾಷೆಯಲ್ಲಿ ಕೂಗಿ ಕೊಂಡು ತಂದೆಯನ್ನು ಕರೆಯುತ್ತಿರುವ ಧ್ವನಿ ಕೇಳಿಸಿದೆ ಎನ್ನಲಾಗಿದೆ.

ಬಳಿಕ ಪುತ್ರಿ ಕಲಿಯುತ್ತಿರುವ ಕಾಲೇಜನ್ನು ಉದ್ಯಮಿ ಸಂಪರ್ಕಿಸಿದಾಗ, ಈ ರೀತಿ ನಮ್ಮ ಕಾಲೇಜಿನ ಹಲವು ವಿದ್ಯಾರ್ಥಿಗಳ ಪೋಷಕರಿಗೆ ಕರೆ ಬಂದಿರುವುದಾಗಿಯೂ ಗಾಬರಿಯಾಗಬೇಕಾದ ಆವಶ್ಯಕತೆ ಇಲ್ಲದವೆಂದೂ ಆಕೆ ಸುರಕ್ಷಿತಳಾಗಿರುವುದಾಗಿ ತಿಳಿದ ನಂತರ ಉದ್ಯಮಿ ನಿಟ್ಟುಸಿರು ಬಿಟ್ಟಿದ್ದಾರೆ.



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×