ಉಳ್ಳಾಲ ತೀರದ ವ್ಯಥೆಯ ಕಥೆ
ಮಹಾನಗರ, ಜೂ. 2: 'ನನಗೆ ಸರಿಯಾಗಿ ನೆನಪಿದೆ. ಸರಿ ಸುಮಾರು 30 ವರ್ಷಗಳ ಹಿಂದೆ ಕಡಲು ಈಗ ಇರುವುದಕ್ಕಿಂತ ಸುಮಾರು ಒಂದೆರಡು ಮೈಲು ದೂರದಲ್ಲಿತ್ತು. ಎಷ್ಟೋ ಮನೆ ಇತ್ತು. ತೆಂಗಿನ ಮರಗಳಿತ್ತು. ಕೆಲವರಿಗೆ ಆಟದ ಮೈದಾನವೂ ಇತ್ತು. ಆದರೆ ವರ್ಷ ಕಳೆದ ಹಾಗೆಯೇ ಮನೆ-ಮರ ಎಲ್ಲವನ್ನು ಕಡಲು ತನ್ನೊಡಲಿಗೆ ನುಂಗಿದೆ. ಈಗ ಕಡಲು ನಮ್ಮ ಮನೆ ಪಕ್ಕದಲ್ಲೇ ಇದೆ!
ಕಡಲ ಅಲೆಗಳ
ಏರಿಳಿತವನ್ನು
ಸುದೀರ್ಘ ವರ್ಷಗಳಿಂದ ಹತ್ತಿರದಿಂದ
ಬಲ್ಲ ಕೈಕೋದಲ್ಲಿ ಗೂಡನಂಗಡಿ ನಡೆಸುತ್ತಿರುವ ಹಸನಬ್ಬ
ಅವರು ಹೇಳುತ್ತಿದ್ದಾಗ ಅಲೆಗಳ
ಭೋರ್ಗರೆಯುವ ಸದ್ದು ಕೂಡ 'ಹೌದು'
ಎನ್ನುವಂತೆ ಭಾಸವಾಗುತ್ತಿತ್ತು!
'ಹಲವು ವರ್ಷಗಳ ಹಿಂದೆಗೆ ಹೋಲಿಸಿದರೆ 2 ವರ್ಷಗಳಿಂದ ದೊಡ್ಡಸಮಸ್ಯೆ ಇಲ್ಲ; ಯಾಕೆಂದರೆ ಇಲ್ಲಿ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ಆದರೂ ಈಗ ಆಗೊಮ್ಮೆ-ಈಗೊಮ್ಮೆ ತಡೆಗೋಡೆ ಯನ್ನೂ ಮೀರಿ ಕಡಲು ತನ್ನ ಅಸ್ತಿತ್ವ ತೋರುವು ದುಂಟು. ನೀರು ಬರುವುದೂ ಉಂಟು ತಡೆಗೋಡೆಯೂ ಎಲ್ಲಿಯವರೆಗೆ ನಮಗೆ ಭದ್ರತೆ ಎಂಬುದು ಗೊತ್ತಿಲ್ಲ' ಎನ್ನುತ್ತಾರೆ ಅವರು.
*2-3 ಕಿ.ಮೀ. ತೀರ ಕಡಲ ಪಾಲು*
ಸಯ್ಯದ್ ಮದನಿಚಾರಿತ್ರಿಕ ಹಿನ್ನೆಲೆ ಇರುವಉಳ್ಳಾಲದ ತೀರ ಪ್ರದೇಶವು ನಿಧಾನವಾಗಿ ಕಡಲ ಪಾಲಾಗುತ್ತಿದೆ. 3 ದಶಕಗಳಿಂದ ಇಲ್ಲಿ ಹೆಚ್ಚು ಕಡಿಮೆ 2ರಿಂದ 3 ಕಿ.ಮೀ.ಗಳಷ್ಟು ತೀರ ಪ್ರದೇಶವು ಕಡಲ ಪಾಲಾಗಿದೆ. ಮುಂಗಾರಿನ ವೇಳೆ ಉಳ್ಳಾಲ ಸಮುದ್ರತೀರದಲ್ಲಿ ಅಲೆ ಗಳ ಆರ್ಭಟ ಹೆಚ್ಚು ಸೋಮೇಶ್ವರ ಸಮೀಪದ ಬಟ್ಟಪಾಡಿ, ನ್ಯೂ ಉಚ್ಚಿಲದಲ್ಲಿ ಆದ ಹಾಗೆ ಮುಕ್ಕಚ್ಚೇರಿ, ಸುಭಾಷ್ ನಗರ, ಕೈಕೋ, ಹಿಲೇರಿ ಯಾನಗರ, ಕೋಟೆಪುರ, ಮೊಗವೀರಪಟ್ಟ ಸಹಿತ ವಿವಿಧ ತೀರ ಪ್ರದೇಶದ ಕೆಲವು ಭಾಗ ಕಡಲಿಗೆ ಆಹಾರವಾಗಿದೆ.
*ಬರ್ತಾರೆ, ನೋಡ್ತಾರೆ, ಹೋಗ್ತಾರೆ; ಅಭ್ಯಾಸ* !
'ರಾಜಕಾರಣಿಗಳು, ಅಧಿಕಾರಿಗಳು ಇಲ್ಲಿಗೆ ಬರ್ತಾರೆ, ನೋಡ್ತಾರೆ, ಹೋಗ್ತಾರೆ-ಅವರಿಗೆ ಅಭ್ಯಾಸ ಆಗಿದೆ. ಇಲ್ಲಿ ಬಂದು ಸಮಸ್ಯೆ ಏನು ಅಂತ ಕೇಳ್ತಾರೆ. ನಾವು ಹೇಳ್ತವೆ. ಮತ್ತೆ ಅವರು ಬರುವುದು ಮುಂದಿನ ವರ್ಷದ ಮಳೆಗಾಲಕ್ಕೆ ನಮಗೆಲ್ಲ ಜಾಗ ಕೊಡ್ತವೆ-ಲೋನ್ ಕೊಡ್ತವೆ, ಮನೆ ಕೊಡ್ತವೆ ಅಂತ ಹೇಳಿ ಹೋಗಿ ವರ್ಷಗಳೇ ಕಳೆದುವು. ಈಗ ಅವರಿಗೆ ಅದು ನೆನಪೇ ಇಲ್ಲ. ಕೋಟಿಗಟ್ಟಲೆ ಹಣವನ್ನು ಕಡಲಿಗೆ ಸುರಿಯುವ ಬದಲು ಆ ಹಣದಿಂದ ನಮಗೆ ಬೇರೆ ಕಡೆ ಮನೆ ಕಟ್ಟಿಕೊಡುತ್ತಿದ್ದರೆ ಏನಾಗುತ್ತಿತ್ತು?' ಎನ್ನುತ್ತಾರೆ ಕೈಕೋ ನಿವಾಸಿಗಳು.
Tags:
Breaking