ಇತ್ತೀಚಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಕೋಮು ಭಾವನೆಯನ್ನು ಕೆರಳಿಸುವ ಘಟನೆಗಳು ಆಗಾಗ ಘಟಿಸುತ್ತಿರುವುದು ಬಹಳ ಖೇದಕರ. ಕಳೆದ ವಿಧಾನಸಭಾ ಚುನಾವಣೆಗೆ ಮೊದಲು ಈ ಜೆಲ್ಲೆಯನ್ನು ಕೋಮುವಾದದ ಕಾರಸ್ಥಾನವನ್ನಾಗಿ ಮಾಡಿ ಇಲ್ಲಿ ಗಲಭೆಯನ್ನು ಎಬ್ಬಿಸಿ ಅದರ ಪ್ರಭಾವವನ್ನು ಬಳಸಿ ರಾಜ್ಯಾದ್ಯಂತ ಅದನ್ನು ಪಸರಿಸಿ ಅಧಿಕಾರವನ್ನು ಪಡೆಯುವ ತವಕದಲ್ಲಿದ್ದ ಕೋಮುವಾದಿಗಳ ಕನಸನ್ನು ನುಚ್ಚುನೂರಿಗುಳಿಸುವ ಭಾಗವಾಗಿ ಇಲ್ಲಿಯ ಪ್ರಮುಖ ಜ್ಯಾತ್ಯಾತೀತ ಪಕ್ಷವೊಂದು ಇಲ್ಲಿ ಕೋಮು ಗಲಭೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುವುದು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಕರ್ನಾಟಕದ ಜನತೆಗೆ ನೀಡಿತ್ತು. ಆದರೆ ಕಾಂಗ್ರೆಸ್ ಸರಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಗಳಿಸಿದ ಬಳಿಕ ತನ್ನ ಭರವಸೆಯನ್ನೇ ಮರೆತ ಅದು ದ.ಕ. ಜಿಲ್ಲೆಯಲ್ಲಿ ಕೋಮು ಪ್ರೇರಿತ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಖಂಡನೀಯ.*
*ದ.ಕ.ಜಿಲ್ಲೆಯಲ್ಲಿ ಮಸೀದಿಗಳಲ್ಲಿ ಆಯುಧಗಳಿವೆ ಎಂಬ ವಿವಾದಾತ್ಮಕ ಹೇಳಿಕೆಯ ಹಿಂದೆ ಈ ಜಿಲ್ಲೆಯಲ್ಲಿ ಮತ್ತೊಮ್ಮೆ ಬೆಂಕಿ ಹಚ್ಚುವ ನಿಗೂಢ ತಂತ್ರಗಾರಿಕೆ ಇದೆ ಎಂಬುದು ಬಹಳ ಸ್ಪಷ್ಟ ಮುಸಲ್ಮಾನರ ಕುರಿತು ಈ ಮೊದಲೂ ಇಂತಹ ಹೇಳಿಕೆಗಳನ್ನು ನೀಡಿರುವ ಶಾಸಕರ ನುಡಿಗಳು ಜಿಲ್ಲೆಯ ಸೌಹಾರ್ದತೆ ಯನ್ನು ನಾಶಗೊಳಿಸುವ ಯೋಜಿತ ಕೃತ್ಯವಾಗಿದೆ. ಸರಕಾರ ಇದನ್ಮು ಗಂಭೀರವಾಗಿ ಪರಿಗಣಿಸಬೇಕು. ಅವರ ಮೇಲೆ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು*
*ಸರಕಾರ ರಚಿಸಿರುವ ಕಮ್ಯುನಲ್ ಟಾಸ್ಕ್ ಫೋರ್ಸ್ ನ ಕೆಲಸವೇನು? ಅದ್ಯಾಕೆ ದುರ್ಬಲ ಗೊಂಡಿದೆ ಎಂದು ಜಿಲ್ಲೆಯ ಜನತೆ ಪ್ರಶ್ನಿಸುವಂತಾಗಿದೆ. ಕ್ರಮಕೈಗೊಳ್ಳಲು ಸರಕಾರ ಏಕೆ ಹೆದರುತ್ತಿದೆ ಎಂಬ ಪ್ರಶ್ನೆಯೂ ಉಂಟಾಗಿದೆ.*
*ಮಸೀದಿಗಳು ದೇವಾರಾಧನೆಯ ಕೇಂದ್ರಗಳಾಗಿವೆ. ಮಸೀದಿಗಳು ಶಾಂತಿಯನ್ನು ಬೋಧಿಸುವ ಕೇಂದ್ರಗಳಾಗಿವೆ. ಈ ಮಸೀದಿ ಏನು ಎಂಬುದು ಈ ಜಿಲ್ಲೆಯ ಬಹು ಸಂಖ್ಯಾತ ಹಿಂದೂಗಳಿಗೆ ಚೆನ್ನಾಗಿ ತಿಳಿದಿದೆ. ಈ ಹೇಳಿಕೆಯನ್ನು ಸೌಹಾರ್ದ ಪ್ರಿಯರೆಲ್ಲರೂ ಖಂಡಿಸುತ್ತಾರೆ. ಶಾಸಕರು ನೀಡಿರುವ ಹೇಳಿಕೆ ಮತಿ ವೈಕಲ್ಯದ ಪರಮಾವಧಿ*
*ರಫೀಉದ್ದೀನ್ ಕುದ್ರೋಳಿ*
ಅಧ್ಯಕ್ಷರು
ಯುನಿವೆಫ್ ಕರ್ನಾಟಕ
🔥🔥🔥🔥🔥🔥🔥🔥🔥🔥🔥
