ಉಳ್ಳಾಲ : ಮದನಿ ನಗರದಲ್ಲಿ ಅನಾಹುತ ನಡೆದ ಮನೆಗೆ ಭೇಟಿ ನೀಡಿದ ಮುಸ್ಲಿಂ ಜಸ್ಟೀಸ್ ಫೋರಂ ತಂಡ.

 


ಉಳ್ಳಾಲ : ಮದನಿ ನಗರದಲ್ಲಿ ಅನಾಹುತ ನಡೆದ ಮನೆಗೆ ಭೇಟಿ ನೀಡಿದ ಮುಸ್ಲಿಂ ಜಸ್ಟೀಸ್ ಫೋರಂ ತಂಡ.

ಉಳ್ಳಾಲ ತಾಲೂಕಿನ ಕುತ್ತಾರ್ ಮದನಿ ನಗರದಲ್ಲಿ ಸಂಭವಿಸಿದ ಘಟನೆಯಲ್ಲಿ ದಂಪತಿ ಸೇರಿ 2 ಮಕ್ಕಳು ಮರಣ ಹೊಂದಿದ ಘಟನೆ ಇಂದು ಬುಧವಾರ 26 ರಂದು ಮುಂಜಾನೆ ಸಂಭವಿಸಿದೆ. ಕಂಪೌಂಡ್ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿದ್ದ ದಂಪತಿ, ಎರಡು ಮಕ್ಕಳು ಸೇರಿದಂತೆ 4 ಜನರು ಮೃತರಾಗಿದ್ದಾರೆ, ಈ ಘಟನೆಯು ಬಹಳ ದುಃಖಕರವಾದ ಹಾಗೂ ಮನಕುಲುಕುವಂತಹ ಘಟನೆಯಾಗಿದೆ. ಅನಾಹುತಕ್ಕೆ ಇಡೀ ಮದನಿ ನಗರ ಪ್ರದೇಶವೇ ಸ್ತಬ್ದಗೊಂಡಿದೆ.  

ಅನಾಹುತ ನಡೆದ ಮನೆಗಳಿಗೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಮುಸ್ಲಿಂ ಜಸ್ಟೀಸ್ ಫೋರಂ ತಂಡ ಕುಟುಂಬಕ್ಕೆ ಸಾಂತ್ವನವನ್ನು ನೀಡುವುದರೊಂದಿಗೆ ಆದಷ್ಟು ಬೇಗ ತುರ್ತು ಪರಿಹಾರವನ್ನು ನೀಡಲು ಸರಕಾರ ಹಾಗೂ ಉಸ್ತುವಾರಿ ಸಚಿವರನ್ನು ಒತ್ತಾಯಿಸುವುದಾಗಿ ತಿಳಿಸಿದೆ.  

ಭೇಟಿ ನೀಡಿದ ತಂಡದಲ್ಲಿ ಮುಸ್ಲಿಂ ಜಸ್ಟೀಸ್ ಫೋರಂ ಇದರ ಅಧ್ಯಕ್ಷರಾದ ಇರ್ಷಾದ್ ಯು ಟಿ, ಉಪಾಧ್ಯಕ್ಷರಾದ ಇಕ್ಬಾಲ್ ಸಾಮಾನಿಗೆ, ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ ಹಾಗೂ ನವಾಜ್ ಉಳ್ಳಾಲ್ ಉಪಸ್ಥಿತರಿದ್ದರು.

ಪ್ರಕಟಣೆ: ಮುಸ್ಲಿಂ ಜಸ್ಟೀಸ್ ಫೋರಂ, ಕರ್ನಾಟಕ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×