ದ.ಕ ಜಿಲ್ಲೆಯ ಮಸೀದಿಗಳಲ್ಲಿ ಮಾರಕಾಯುಧಗಳಿವೆ ಎಂಬ ಹೇಳಿಕೆ ನೀಡುವ ಮೂಲಕ ಮಸೀದಿಗಳ ಬಗ್ಗೆ ಅವಹೇಳನಗೈದ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಖಿಲಿರಿಯಾ ಜುಮಾ ಮಸ್ಜಿದ್ ಉಳ್ಳಾಲ ಇದರ ಪದಾಧಿಕಾರಿಗಳು ಉಳ್ಳಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇತ್ತೀಚಿಗೆ ಉಳ್ಳಾಲ ಕ್ಷೇತ್ರದ ಬೋಳಿಯಾರ್'ನಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದ.ಕ ಜಿಲ್ಲೆಯ ಮಸೀದಿಗಳಲ್ಲಿ ಮಾರಕಾಯುಧಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲಾ ಮಸೀದಿಗಳಲ್ಲಿ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದ್ದರು. ಮಸೀದಿಗಳ ಪಾವಿತ್ರತೆ ಕುರಿತು ಪ್ರಚೋದನಾಕಾರಿಯಾಗಿ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಕೋಮು ಸಾಮರಸ್ಯಕ್ಕೆ ಕೊಲ್ಲಿ ಇಡುವ ಪ್ರಯತ್ನ ಮಾಡಿದ್ದರು. ಇದನ್ನು ವಿರೋಧಿಸಿ ಖಿಲಿರಿಯಾ ಜುಮಾ ಮಸ್ಜಿದ್ ಕಡಪರ ಉಳ್ಳಾಲ ಇದರ ಪದಾಧಿಕಾರಿಗಳು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ನಿಯೋಗದಲ್ಲಿ ಅಧ್ಯಕ್ಷರಾದ ಖಲೀಲ್ ಉಳ್ಳಾಲ,ಉಪ್ಪಾಧ್ಯಕ್ಷ ಹಸನಬ್ಬ, ಕಾರ್ಯದರ್ಶಿ ಬಾತಿಶ್, ಸಮಿತಿ ಸದಸ್ಯರಾದ ಸಾದಿಕ್, ಸಿರಾಜ್,ನಿಸಾರ್,
ಊರಿನ ಗಣ್ಯರಾದ ಅರಾಫತ್ ಮತ್ತು ಮುಸ್ಲಿಮ್ ಒಕ್ಕೂಟ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ ಉಪಸ್ಥಿತರಿದ್ದರು.
