ನಿತ್ಯವೂ ಒಂದಲ್ಲಾ ಒಂದು ವ್ಯವಹಾರದಲ್ಲಿ ಡಿಜಿಟಲ್ ಪಾವತಿ ಉದ್ದೇಶದಿಂದ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂ (Google Pay, PhonePe, Paytm) ಅನ್ನು ಬಳಕೆ ಮಾಡುತ್ತೇವೆ. ಇವು ಎಷ್ಟೇ ಸೆಕ್ಯೂರ್ ಇದ್ದರೂ ಸಹ ಹ್ಯಾಕರ್ಸ್‌ಗಳು ತಮ್ಮ ಜಾಣ್ಮೆ ಪ್ರದರ್ಶಿಸಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯಬಹುದು.
ಹೌದು, ಈ ವಿಷಯ ಕೇಳಿ ನಿಮಗೆ ಖಂಡಿತಾ ಶಾಕ್ ಆಗಿರಬಹುದು. ಆದರೆ, ಇದನ್ನು ನಿಯಂತ್ರಿಸಲು ಅಥವಾ ಈ ರೀತಿಯ ಹ್ಯಾಕಿಂಗ್‌ನಿಂದ ಪಾರಾಗಲು ಸಹ ಅವಕಾಶ ಇದೆ. ಇದಕ್ಕಾಗಿ ಈಗಾಗಲೇ ಪಾವತಿ ಅಪ್ಲಿಕೇಶನ್‌ಗಳು ಪಾಸ್‌ವರ್ಡ್ ಹೊಂದಿಸುವ ಆಯ್ಕೆಯನ್ನು ನೀಡಿವೆ. ಜೊತೆಗೆ ಆಪ್ ತೆರೆಯಲು ಬಯೋಮೆಟ್ರಿಕ್ ಲಾಕ್ ಆಯ್ಕೆ ಸಹ ನೀಡಲಾಗಿದೆ. ಈ ಮೂಲಕ ಯುಪಿಐ ಪಾವತಿ ಪ್ರಕ್ರಿಯೆಯಲ್ಲಿ ಹೆಚ್ಚು ಭದ್ರತೆಯನ್ನು ನಿರೀಕ್ಷಿಸಬಹುದು.
ಹೆಚ್ಚುತ್ತಿರುವ ಸ್ಕ್ಯಾಮ್: ಭಾರತದಲ್ಲಿ ಆನ್‌ಲೈನ್ ಹಗರಣ ತೀವ್ರ ಗತಿಯಲ್ಲಿ ಏರಿಕೆ ಆಗುತ್ತಿದೆ. ವಂಚಕರು ಜನರನ್ನು ಮೋಸಗೊಳಿಸಲು ಹಾಗೂ ಅವರಿಂದ ಹಣವನ್ನು ಕದಿಯಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾದುದು ಮಾಲ್‌ವೇರ್ ಇರುವ ಲಿಂಕ್ ಅನ್ನು ಸೆಂಡ್ ಮಾಡುವುದರ ಜೊತೆಗೆ ಅದನ್ನು ಕ್ಲಿಕ್ ಮಾಡಿ ಹಾಗೂ ಡೌನ್‌ಲೋಡ್ ಮಾಡಿ ಎಂದು ಒತ್ತಡ ಹಾಕುತ್ತಾರೆ.
ಅವರು ಹೇಳಿದಂತೆ ಏನಾದರೂ ಬಳಕೆದಾರರು ಮಾಡಿದ್ರೆ ಖಾತೆಯಲ್ಲಿನ ಹಣ ಕ್ಷಣ ಮಾತ್ರದಲ್ಲಿ ಮಂಗಮಾಯವಾಗುತ್ತದೆ. ಅಂದರೆ ವಂಚಕರು ಮೊಬೈಲ್ ಫೋನ್‌ಗಳಿಗೆ ರಿಮೋಟ್ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ. ಇತ್ತೀಚೆಗೆ ಸ್ಕ್ಯಾಮರ್‌ಗಳಿಗೆ ರಿಮೋಟ್ ಪ್ರವೇಶವನ್ನು ನೀಡುವ ಆಪ್ ಅನ್ನು ಡೌನ್‌ಲೋಡ್ ಮಾಡಿದ ನಂತರ ಸುಮಾರು 2 ಲಕ್ಷ ರೂಪಾಯಿಗಳನ್ನು ಓರ್ವ ಕಳೆದುಕೊಂಡಿದ್ದಾನೆ. ಇದನ್ನು ದೆಹಲಿ ಪೊಲೀಸರು ಜಾಲಾಡಿದ್ದಾರೆ.
ಈ ಕಾರಣಕ್ಕಾಗಿಯೇ ಅನುಮಾನಾಸ್ಪದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡದಿರುವುದು ಅಥವಾ ಅಪರಿಚಿತ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿಯನ್ನು ಶೇರ್ ಮಾಡಿಕೊಳ್ಳದಿರುವುದು ಒಳ್ಳೆಯ ಮಾರ್ಗವಾಗಿದೆ. ನೀವು ಸಂಭಾವ್ಯವಾಗಿ ಇಂತಹ ಬಲೆಗೆ ಬೀಳುವ ಮತ್ತು ಅಜಾಗರೂಕತೆಯಿಂದ ನಿಮ್ಮ ಫೋನ್‌ಗೆ ಸ್ಕ್ಯಾಮರ್‌ಗಳಿಗೆ ರಿಮೋಟ್ ಪ್ರವೇಶವನ್ನು ನೀಡುವ ಬಗ್ಗೆ ಕಾಳಜಿ ಹೊಂದಿದ್ದೇ ಆದರೆ ಸ್ಕ್ಯಾಮರ್‌ಗಳು ನಿಮ್ಮ ಯುಪಿಐ ಐಡಿಯನ್ನು ಪ್ರವೇಶಿಸುವುದನ್ನು ತಡೆಯಲು ಈ ಕೆಲಸ ಮಾಡಿ.
UPI ಆಪ್‌ನಲ್ಲಿ ಬಯೋಮೆಟ್ರಿಕ್ ದೃಢೀಕರಣವನ್ನು ಸಕ್ರಿಯಗೊಳಿಸಿ:
ನಿಮ್ಮ UPI ಐಡಿಯನ್ನು ರಕ್ಷಿಸಲು ಎರಡು-ಹಂತದ ದೃಢೀಕರಣವನ್ನು ಮಾಡಿ ಆದಾಗ್ಯೂ, ಸಹ ಓಟಿಪಿ ಗಳನ್ನು ಪಡೆಯಲು ಸ್ಕ್ಯಾಮರ್‌ಗಳು ಎಸ್‌ಎಮ್‌ಎಸ್ ಆಪ್‌ಅನ್ನು ಅನ್ನು ಹ್ಯಾಕ್ ಮಾಡಬಹುದು. ಈ ಕಾರಣಕ್ಕೆ ನೀವು ಏನು ಮಾಡಬಹುದು ಎಂದರೆ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂ ನಂತಹ ಆಪ್‌ಗಳನ್ನು ಓಪನ್ ಮಾಡಲು ಬಯೋಮೆಟ್ರಿಕ್ ದೃಢೀಕರಣವನ್ನು ಸಕ್ರಿಯಗೊಳಿಸಿ.
ಇದರಲ್ಲೇನು ವಿಶೇಷ ಇದೆ ಎಂದು ನೀವು ಕೇಳಬಹುದು. ಫೋನ್‌ನ ಇನ್‌ಬಿಲ್ಟ್ ಭದ್ರತಾ ಫೀಚರ್ಸ್‌ಗಳನ್ನು ಬಳಸುವುದು ಹೆಚ್ಚುವರಿ ಭದ್ರತಾ ವ್ಯವಸ್ಥೆಯನ್ನು ಬಳಕೆ ಮಾಡಿದಂತೆ.
ನಿಮ್ಮ UPI ಆಪ್ ಅನ್ನು ಓಪನ್ ಮಾಡಲು ಮುಂದಾದಾಗ ನಿಮ್ಮ ಮುಖವನ್ನು ತೋರಿಸುವ ಮೂಲಕ ಅಥವಾ ನಿಮ್ಮ ಫಿಂಗರ್‌ಪ್ರಿಂಟ್ ಒದಗಿಸುವ ಮೂಲಕ ನಿಮ್ಮ ಗುರುತನ್ನು ನೀವು ಪರಿಶೀಲಿಸಬೇಕಾಗುತ್ತದೆ. ನಿಮ್ಮ ಡಿವೈಸ್ ಅನ್ನು ರಿಮೋಟ್ ಆಗಿ ಪ್ರವೇಶಿಸುತ್ತಿರುವ ಸ್ಕ್ಯಾಮರ್‌ಗಳಿಗೆ ಈ ಮಾರ್ಗದಿಂದಾಗಿ ನಿಮ್ಮ ಫೋನ್‌ಗೆ ಎಂಟ್ರಿ ಪಡೆದುಕೊಳ್ಳಲು ಸಾಧ್ಯ ಆಗುವುದಿಲ್ಲ.
ಗೂಗಲ್ ಪೇನಲ್ಲಿ ಬಯೋಮೆಟ್ರಿಕ್ ಲಾಕ್ ಅನ್ನು ಹೇಗೆ ಆನ್ ಮಾಡುವುದು ಹೇಗೆ?
ಹಂತ 1 : ಮೊದಲು ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಆಪ್ ಓಪನ್ ಮಾಡಿ. ಬಳಿಕ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಟ್ಯಾಪ್ ಮಾಡಿ. ಅದರಲ್ಲಿ ಸೆಟ್ಟಿಂಗ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿದ್ರೆ ಗೌಪ್ಯತೆ ಮತ್ತು ಭದ್ರತೆ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ. ಇದಾದ ಬಳಿಕ ಸ್ಕ್ರೀನ್ ಲಾಕ್ ಬಳಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
ಹಂತ 2: ಒಮ್ಮೆ ನೀವು ಸ್ಕ್ರೀನ್ ಲಾಕ್ ಅನ್ನು ಹೊಂದಿಸಿದ ನಂತರ ಫಿಂಗರ್‌ಪ್ರಿಂಟ್ ಬಳಸಿ ಟ್ಯಾಪ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಅದರಲ್ಲಿ ನಿಮ್ಮ ಫಿಂಗರ್‌ಪ್ರಿಂಟ್ ಅನ್ನು ಸ್ಕ್ಯಾನ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ಇದಾದ ನಂತರದಲ್ಲಿ ಮುಂದುವರಿಸಿ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಬಳಿಕ ಬಯೋಮೆಟ್ರಿಕ್ ಲಾಕ್ ಅನ್ನು ಆನ್ ಮಾಡಲು ಆನ್ ಮಾಡಿ ಟ್ಯಾಪ್ ಮಾಡಿ.
ಫೋನ್‌ಪೇನಲ್ಲಿ ಬಯೋಮೆಟ್ರಿಕ್ ಲಾಕ್ ಅನ್ನು ಹೇಗೆ ಆನ್ ಮಾಡುವುದು?
ಹಂತ 1: ಮೊದಲು ನಿಮ್ಮ ಫೋನ್‌ನಲ್ಲಿ ಫೋನ್ ಪೇ ಆಪ್ ಓಪನ್ ಮಾಡಿ. ಬಳಿಕ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿದರೆ ಸೆಕ್ಯುರಿಟಿ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ನಂತರದಲ್ಲಿ ಸ್ಕ್ರೀನ್ ಲಾಕ್ ಮೇಲೆ ಟ್ಯಾಪ್ ಮಾಡಿದ್ರೆ ಸ್ಕ್ರೀನ್ ಲಾಕ್ ಅಕ್ರಿಯಗೊಳಿಸಿ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ.ಇದಾದ ನಂತರದಲ್ಲಿ ನಿಮ್ಮ ಆದ್ಯತೆಯ ಬಯೋಮೆಟ್ರಿಕ್ ವಿಧಾನವನ್ನು ಆಯ್ಕೆಮಾಡಿ ಬಳಿಕ ಸೆಟ್ ಮೇಲೆ ಟ್ಯಾಪ್ ಮಾಡಿ.
ಪೇಟಿಎಮ್‌ನಲ್ಲಿ ಬಯೋಮೆಟ್ರಿಕ್ ಲಾಕ್ ಅನ್ನು ಹೇಗೆ ಆನ್ ಮಾಡುವುದು?
ಹಂತ 1: ಮೊದಲು ಫೋನ್‌ನಲ್ಲಿ ಪೇಟಿಎಮ್ ಆಪ್ ಓಪನ್ ಮಾಡಿ. ಇದರಲ್ಲೂ ಸಹ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಅದರಲ್ಲಿ ಕಾಣಿಸಿಕೊಳ್ಳುವ ಭದ್ರತೆ ವಿಭಾಗದ ಮೇಲೆ ಟ್ಯಾಪ್ ಮಾಡಿ. ನಂತರದಲ್ಲಿ ಬಯೋಮೆಟ್ರಿಕ್ ಲಾಕ್ ಅನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಫಿಂಗರ್‌ಪ್ರಿಂಟ್ ಅಥವಾ ಮುಖವನ್ನು ಸ್ಕ್ಯಾನ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
