ಸೋಮೇಶ್ವರ ಪುರ ಸಭೆ ವ್ಯಾಪ್ತಿಯ, ಬಟ್ಟಪಾಡಿ ಎಂಬಲ್ಲಿ, ಸಮುದ್ರದ ದೈತ್ಯ ಗಾತ್ರದ ಅಲೆಗೆ, ಶ್ರೀಮತಿ ರಾಜೀವಿ, ಮತ್ತು ಬೀಪಾತುಮ್ಮ ರವರ ಮನೆ ಸಂಪೂರ್ಣ ಸಮುದ್ರ ದ ಅಲೆಗೆ ಕುಸಿದು ಬಿದ್ದಿದೆ. ಸಮುದ್ರ ಬದಿಯಲ್ಲಿ ವಾಸಿಸುವಂತಹ, ಸಂತ್ರಸ್ತ ಕುಟುಂಬಗಳು ಬೇರೆ ಕಡೆ ಸ್ಥಳಾಂತರ ಗೊಂಡಿರುತ್ತಾರೆ. ಇನ್ನೂ ಭಾರಿ ಮಳೆ, ಗಾಳಿ ,ಮತ್ತು ಸಮುದ್ರ ಅಲೆಗೆ ಇನ್ನಷ್ಟು ಮನೆಗಳು ಅಪಾಯದ ಅಂಚಿನಲ್ಲಿದೆ. ಜಿಲ್ಲಾಡಳಿತ, ಮತ್ತು ವಿಪತ್ತು ನಿರ್ವಹಣಾ ಕಾರ್ಯ ಪಡೆ, ಆದಷ್ಟು ಬೇಗ, ಸೋಮೇಶ್ವರ ಪುರ ಸಭೆ ವ್ಯಾಪ್ತಿಯ ಬಟ್ಟಪಾಡಿಗೆ, ಜಿಲ್ಲಾಧಿಕಾರಿ ಯವರು, (ಜಿಲ್ಲಾಡಳಿತ ) ಸಂತ್ರಸ್ತ ಕುಟುಂಬಗಳಿಗೆ ಆದಷ್ಟು ಬೇಗ ಪರಿಹಾರವನ್ನು ನೀಡಬೇಕು ಮತ್ತು, ಅವರಿಗೆ ಬೇರೆ ಕಡೆ ಜಾಗ ಗುರುತಿಸಿ ವಾಸಿಸಲು ಅನುವು ಮಾಡಿಕೊಡಬೇಕು, ಆದುದರಿಂದ ಸ್ಥಳಿಯ ನಿವಾಸಿಗಳು, ಮಳೆ ಗಾಳಿ, ದೈತ್ಯ ಗಾತ್ರದ ಸಮುದ್ರದ ಅಲೆಯಿಂದ, ಭಯದ ವಾತಾವರಣದಲ್ಲಿ ದಿನದೂಡುತ್ತಿದ್ದಾರೆ, ಮಾನ್ಯ ಜಿಲ್ಲಾಧಿಕಾರಿಗಳು ಅದೆಷ್ಟು ಬೇಗ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಿ, ಸಮುದ್ರದ ಅಲೆಯಿಂದ ಸ್ಥಳೀಯರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ, ( ರೆಡ್ ಅಲರ್ಟ್ ಘೋಷಿಸಲಾಗಿದೆ, (ಆದಷ್ಟು ಬೇಗ, ಸಮುದ್ರ ಕೊರತೆಗೆ "ಪರಿಹಾರವನ್ನು ಕಂಡುಕೊಳ್ಳಲು, ಶಾಶ್ವತ ತಡಗೋಡೆಯನ್ನು ನಿರ್ಮಿಸಬೇಕು ಎಂದು ಸ್ಥಳೀಯರು, ಜಿಲ್ಲಾಧಿಕಾರಿಗೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಪಡಿಸಿದ್ದಾರೆ........ ಸುದ್ದಿ ಜಾಲ ಸೋಮೇಶ್ವರ,ವರದಿ ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು.
By Social Farooq
