ಕಂಕನಾಡಿ ಮಸೀದಿ ರಸ್ತೆಯಲ್ಲಿ ಪ್ರಾರ್ಥನೆ : ಜಿಲ್ಲಾ ವಕ್ಸ್ ಅಧ್ಯಕ್ಷರ ಸ್ಪಷ್ಟನೆ
ಮಂಗಳೂರು ನಗರದ ಕಂಕನಾಡಿ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ನಮಾಜನ್ನು ರಸ್ತೆಯಲ್ಲಿ ನಡೆಸಿರುವ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ವರದಿ ಮತ್ತು ಪ್ರತಿಕ್ರಿಯೆಗಳ ಬಗ್ಗೆ ಸ್ಪಷ್ಟಪಡಿಸುವುದೇನೆಂದರೆ, ಮುಸ್ಲಿಮರು ಶುಕ್ರವಾರ ಅಪರಾಹ್ನ ನಮಾಜನ್ನು ಸಾಮೂಹಿಕವಾಗಿ ನಿರ್ವಹಿಸಬೇಕಾಗಿದ್ದು, ಇದಕ್ಕಾಗಿ ತಮ್ಮ ಮನೆ ಪರಿಸರದ ಅಥವಾ ಕೆಲಸ ಮಾಡುವ ಸ್ಥಳಕ್ಕೆ ಸಮೀಪದ ಮಸೀದಿಗೆ ತೆರಳಿ ನಿರ್ವಹಿಸುತ್ತಾರೆ. ಸಾಮಾನ್ಯವಾಗಿ ಎಲ್ಲ ಮಸೀದಿಗಳಲ್ಲೂ ಏಕಕಾಲದಲ್ಲಿ ಸಾಮೂಹಿಕ ನಮಾಜು ನಿರ್ವಹಿಸಲು ಸಾಕಷ್ಟು ಸ್ಥಳಾವಕಾಶ ಇರುತ್ತದೆ. ನಗರ ಪ್ರದೇಶಗಳಿಗೆ ಹೆಚ್ಚಿನ ಸಾರ್ವಜನಿಕರು ಆಗಮಿಸುವುದರಿಂದ ನಗರದ ಮಸೀದಿಗಳಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಜುಮಾ ಮಸೀದಿಗಳಲ್ಲೂ ಶುಕ್ರವಾರದ ಸಾಮೂಹಿಕ ನಮಾಜು ನಿರ್ವಹಿಸಲು ಅಗತ್ಯವಿರುವಷ್ಟು ಸ್ಥಳಾವಕಾಶ ಇರುತ್ತದೆ. ಇನ್ನೂ ಹೆಚ್ಚಿನ ಜನರು ಆಗಮಿಸಿದರೆ, ಕಂಪೌಂಡ್ ಒಳಗಡೆ ಇರುವ ಮಸೀದಿ ಕಟ್ಟಡದ ಹೊರಭಾಗದ ಖಾಳಿ ಸ್ಥಳದಲ್ಲಿ ಚಾಪೆ ಹಾಕಿ ನಮಾಜು ನಿರ್ವಹಿಸಲು ಬಹುತೇಕ ಮಸೀದಿಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಹೀಗಾಗಿ, ಸಾರ್ವಜನಿಕ ರಸ್ತೆಯಲ್ಲಿ ನಮಾಜು ನಿರ್ವಹಿಸುವ ಅಗತ್ಯವೇ ಬರುವುದಿಲ್ಲ.
ಮಸೀದಿ ಕಂಪೌಂಡ್ ಹೊರಗಡೆ ಅಥವಾ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವಂತೆ ನಮಾಜ್ ನಿರ್ವಹಿಸಲು ಇಸ್ಲಾಮಿನ ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ಸಾರ್ವಜನಿಕರಿಗೆ ಅಥವಾ ವಾಹನ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡಲು ಇಸ್ಲಾಂ ಧರ್ಮದಲ್ಲಿ ಅವಕಾಶವೇ ಇರುವುದಿಲ್ಲ.
ಕಂಕನಾಡಿ ಮಸೀದಿಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ. ಘಟನೆ ನಡೆದ ಶುಕ್ರವಾರ ಅಪರಾಹ್ನ ಸದರಿ ಮಸೀದಿಯ ಒಳಭಾಗದಲ್ಲಿ ಸಾಮೂಹಿಕ ನಮಾಜ್ ಪ್ರಾರಂಭವಾಗಿದ್ದು. ತಡವಾಗಿ ಬಂದ ಕೆಲವರು ಮಸೀದಿಯ ಆವರಣಕ್ಕೆ ಹೋಗಲು ಸಾಧ್ಯವಾಗದೇ ಮತ್ತು ನಮಾಜ್ ಮಾಡಲು